ರಾಜ್ಯ ಹಾಳು ಮಾಡಿದ್ದು ಬಿಜೆಪಿ ಸರ್ಕಾರ: ಖರ್ಗೆ
ಕ.ಪ್ರ.ವಾರ್ತೆ ಚಿತ್ತಾಪುರ ಏ.30-
ರಾಜ್ಯದಲ್ಲಿ ದುರಾಡಳಿತ ಮಾಡಿ ಹಾಳು ಮಾಡಿದ ಬಿಜೆಪಿ ಅತಿ ಕೆಟ್ಟ ಸರ್ಕಾರ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 5 ವರ್ಷ ಅಧಿಕಾರ ಮಾಡಿದ ಬಿಜೆಪಿ ಸರ್ಕಾರ ಕೇವಲ ಕಚ್ಚಾಟ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಭಿವೃದ್ಧಿ ಮಾಡಲು ಬಿಜೆಪಿಗೆ ಮನಸ್ಸಿಲ್ಲ ಎಂದರು.
ಸೀರೆ, ಸೈಕಲ್, ಕುಪ್ಪಸ ನೀಡಿದರೆ ಅದು ಅಭಿವೃದ್ಧಿಯೇ ಎಂದು ಪ್ರಶ್ನಿಸಿದ ಅವರು ಜನತೆಗೆ ಮೂಲಸೌಲಭ್ಯಗಳು ಕಲ್ಪಿಸಿದಾಗ ಮಾತ್ರ ಅಭಿವೃದ್ಧಿಗೆ ಬೆಲೆ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಅಧಿಕಾರ ನಿಶ್ಚಿತ: 371ನೇ ಕಲಂ ಯಶಸ್ವಿಯಾಗಲು ಹಾಗೂ ಹೈ- ಕ ಪ್ರದೇಶ ಸಮಗ್ರ ಏಳ್ಗೆಗೆ ಕಾಂಗ್ರೆಸ್‌ಗೆ ಬೆಂಬಲಿಸಲು ಅಗತ್ಯವಾಗಿದೆ. ಮತದಾರರು ಬಿಜೆಪಿಗೆ ಬೇಸತ್ತು ಬದಲಾವಣೆ ಬಯಸಿದ್ದಾರೆ ಎಂದ ಅವರು ಹಸ್ತಕ್ಕೆ ಮತ ನೀಡಬೇಕು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.