ಹಣಕ್ಕೆ ನಿರ್ಬಂಧ
ಗುಲ್ಬರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ವ್ಯವಹಾರ ಹೊರತುಪಡಿಸಿ ಸಾರ್ವಜನಿಕರು ಅನಧಿಕೃತವಾಗಿ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಅನಧಿಕೃತವಾಗಿ ತೆಗೆದುಕೊಂಡು ಹೋಗುವಂತಿಲ್ಲ.
ಒಂದು ವೇಳೆ ಅಧಿಕೃತ ದಾಖಲೆಗಳಿಲ್ಲದೆ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುತ್ತಿದ್ದರೆ ಚುನಾವಣಾ ಮಾದರಿ ನೀತಿ ಸಂಹಿತೆಯನ್ವಯ ಸದರಿ ಹಣವನ್ನು ವಶಪಡಿಸಿಕೊಂಡು ಚುನಾವಣಾ ನಿಯಮಾವಳಿಯಂತೆ ಶಿಸ್ತು ಕ್ರಮ ಜರುಗಿಸಲಾಗುವುದು. ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಅಧಿಕ ಹಣ ಸಾಗಿಸುವಾಗ ನಿರ್ದಿಷ್ಟ ಪಡಿಸಿದ ಮಾದರಿ ಕ್ರಮಗಳಂತೆ ಸಾಗಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚಿಸಿದ್ದಾರೆ.