ಇಂದು 'ಶಂಕು'
ಗುಲ್ಬರ್ಗ: ವಾಡಿ ಹಾಗೂ ಗುಲ್ಬರ್ಗದಲ್ಲಿ ಇನ್ನೆರಡು ಮಹತ್ವದ ರೇಲ್ವೆ ಯೋಜನೆಗಳಿಗೆ ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ರೇಲ್ವೆ ಸೌಕರ್ಯದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಲು ಮುಂದಾಗಿದ್ದಾರೆ. ಕೇಂದ್ರ ರೇಲ್ವೆ ಮತ್ತು ರೈಲು ವಿಕಾಸ ನಿಗಮ ನಿಯಮಿತ ಇವರ ಜಂಟಿ ಸಂಯುಕ್ತಾಶ್ರಯದಲ್ಲಿ ವಾಡಿ ಪಟ್ಟಣದಲ್ಲಿರುವ ರೇಲ್ವೆ ನಿಲ್ದಾಣದಲ್ಲಿ ವಾಡಿ- ಗುಲ್ಬರ್ಗ ರೇಲ್ವೆ ವಿದ್ಯುದ್ದೀಕರಣ ಕಾಮಗಾರಿಗೆ ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜನ ಖರ್ಗೆ ಇದೇ ಆ.2ರಂದು ಬೆಳಗ್ಗೆ 10.30ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರೊಂದಿಗೆ ಗುಲ್ಬರ್ಗ ನಗರದಲ್ಲಿ ಕೇಂದ್ರ ರೇಲ್ವೆ ಮತ್ತು ರೈಲು ವಿಕಾಸ ನಿಗಮ ನಿಯಮಿತದ ಜಂಟಿ ಸಂಯುಕ್ತಾಶ್ರಯದಲ್ಲಿ ಗುಲ್ಬರ್ಗ ನಗರದ ನೂತನ ಜೇವರ್ಗಿ ರಸ್ತೆಯಲ್ಲಿರುವ(ಮದರ್ ತೆರೆಸಾ ಶಾಲೆ ಹತ್ತಿರ) ರೇಲ್ವೆ ರಸ್ತೆ ಮೇಲ್ಸೇತುವೆಯ ಪುನರ್ ನಿರ್ಮಾಣ ಮತ್ತು ಅಗಲೀಕರಣ ಕಾಮಗಾರಿಗೂ ಸಚಿವರು ಚಾಲನೆ ನೀಡಲಿದ್ದಾರೆ.
ರೆಡ್ಕ್ರಾಸ್ಗೆ ಆಯ್ಕೆ
ಜೇವರ್ಗಿ: ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಚೆರ್ಮನ್ ಅಪ್ಪಾರಾವ ಅಕ್ಕೋಣಿ ಅವರ ಅಧ್ಯಕ್ಷತೆಯಲ್ಲಿ ಜೇವರ್ಗಿ ತಾಲೂಕು ಘಟಕದ ರೆಡ್ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸ್ಥಳೀಯ ತಹಸೀಲ್ದಾರ್ ಎಂ.ಎನ್. ಗೋಠೆ (ಅಧ್ಯಕ್ಷರು), ಡಾ. ಪಿ.ಎಂ. ಮಠ (ಚೆರಮನ್), ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ್ (ಉಪಾಧ್ಯಕ್ಷ), ಡಾ. ಅಂಬರೀಶ ಕೋಳಕೂರ (ಉಪಾಧ್ಯಕ್ಷ), ವೆಂಕಟರಾವ ಮುಜಮದಾರ (ಖಜಾಂಚಿ), ಐ.ಎಸ್. ಹಿರೇಮಠ (ಕಾರ್ಯದರ್ಶಿ), ಡಾ. ನಾರಾಯಣರಾವ ಪಾಗಾ, ಡಾ. ಸೋಮಶೇಖರ ಪಾಟೀಲ್, ಡಾ. ನಬಿ ಪಟೇಲ್, ಡಾ. ಅರುಂದತಿ, ಡಾ. ವಡೆಯರ್, ಅನೀಲ್ ರಾಂಪುರ, ಉಮಾಕಾಂತ ಗೋಲಗೇರಿ, ಸಂಗಣ್ಣಗೌಡ ಪಾಟೀಲ್, ಎಂ.ಸಿ. ಹಿರೇಮಠ, ಶ್ರೀನಿವಾಸ ವಕೀಲ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಚೆರಮನ್ ಅಪ್ಪಾರಾವ ಅಕ್ಕೋಣಿ ಮಾತನಾಡಿ, ತಾಲೂಕು ಶಾಖೆಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಸಮಿತಿಯಿಂದ ಎಲ್ಲ ನೆರವು ನೀಡುವುದಾಗಿ ತಿಳಿಸಿದರು.
ಜೈಕರವೇಗೆ ಸೇರ್ಪಡೆ
ಗುಲ್ಬರ್ಗ: ನಗರದ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ಕೆಎಚ್ಬಿ ಕಾಲೋನಿ, ಬುದ್ದನಗರ, ಇಂದಿರಾ ನಗರ ಸೇರಿದಂತೆ ಇತರ ಬಡಾವಣೆಗಳ ಯುವಕರು ವೇದಿಕೆಗೆ ಸೇರ್ಪಡೆಗೊಂಡರು. ವೇದಿಕೆಯ ಸಂಸ್ಥಾಪಕ, ಅಧ್ಯಕ್ಷ ಅರುಣುಕುಮಾರ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕೆಎಚ್ಬಿ ಕಾಲೋನಿಯ ನಗರ ಅಧ್ಯಕ್ಷರಾಗಿ ಬಂಟಿ ಕಂಬನೋರ್, ಉಪಾಧ್ಯಕ್ಷರಾಗಿ ಅಭಿಷೇಕ, ಶಿವಶರಣ ದೊಡ್ಮನಿ ನೇಮಕಗೊಂಡರು. ವಾರ್ಡ್ ನಂ. 54ರ ಅಧ್ಯಕ್ಷರಾಗಿ ರಾಮು ರಾಠೋಡ, ಬಸವರಾಜ ಎಂ.ಕೆ. 54ರ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಮಂಜುನಾತ ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಸಚಿನ್ ಫರಹತಾಬಾದ್, ಕಾಶಿನಾಥ ಮಾಳಗೆ, ಬಾಬುರಾವ ಚಿಂಚನಸೂರ್, ಚನ್ನು ಮರಬ್, ಬಿ. ಜಯಸಿಂಗ್, ಸತೀಶ ಎಸ್. ಫರಹತಾಬಾದ್, ಎನ್.ಎಸ್. ಇಂಡಿ ಇತರರು ಉಪಸ್ಥಿತರಿದ್ದರು.
ಬೀಳ್ಕೊಡುಗೆ
ಆಳಂದ: ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಹೆಚ್ಚಿನ ಅಂಕಗಳನ್ನು ಪಡೆದು ಉನ್ನತ ಹುದ್ದೇಗೆರಿದರೆ ಅದೇ ಬೋಧಕರಿಗೆ ನೀಡುವ ಗೌರವ ಎಂದು ಸ್ಥಳೀಯ ಎಚ್ಕೆಇ ಡಿಗ್ರಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಎನ್.ಎಚ್. ಪಾಟೀಲ್ ಹೇಳಿದರು. ಪಟ್ಟಣದ ಎಚ್ಕೆಇ ಪ್ರತಿಷ್ಠಿತ ಎ.ವಿ.ಪಾಟೀಲ್ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಮಗೆ ನೀಡಿದ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಿವೃತ್ತಿಯಾದ ಇನ್ನೊಬ್ಬ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ಕಾಮಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ಚಂದ್ರಕಾಂತ ಘೋಡಕೆ, ಶಶಿಕಾಂತ ಶೀಲವಂತ ಮತ್ತು ಗುರುಲಿಂಗಯ್ಯ ಸ್ವಾಮಿ ಹೊನ್ನಳ್ಳಿ, ಭದ್ರಪ್ಪ ಹರಳಯ್ಯ ಅವರು ನಿವೃತ್ತರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ಎಸ್. ಪಾಗಾ, ಎಸ್.ಎಸ್. ಕಟ್ಟಿ, ಡಾ. ಬಿ.ಪಿ. ಬುಳ್ಳಾ, ಪ್ರೊ. ಬೋನಾಳ, ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.