ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ
ಗುಲ್ಬರ್ಗ: ಮಿಲಿಟರಿ ಸೇವೆಗೆ ಹೋಗಲು ಹೈ-ಕ ಮಂದಿ ಮೊದಲೇ ಒಲ್ಲೆ ಎಂದು ಮೂಗು ಮುರಿಯುವುದೇ ಹೆಚ್ಚು. ಅದರಲ್ಲೂ ಹಳ್ಳಿಯಿಂದ ಯುವಕನೋರ್ವ 1985ರಲ್ಲಿ ಆರ್ಮಿಯಲ್ಲಿ ಭರ್ತಿ ಆಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತನಾಗಿ ತವರೂರು ಮಣ್ಣೂರಿಗೆ ಆಗಮಿಸುತ್ತಿದ್ದಾನೆ. ಇದು ಊರವರಿಗೆ ಹೆಮ್ಮೆ ತಂದಿದೆ. ಅದಕ್ಕೇ ಸೈನಿಕನನ್ನು ಸ್ವಾಗತಿಸಲು ಅದ್ಧೂರಿ ಸಮಾರಂಭವನ್ನೇ ಊರವರು ಹಮ್ಮಿಕೊಂಡಿದ್ದಾರೆ.
1985ರ ಜುಲೈ ತಿಂಗಳಲ್ಲಿ ಸೊಲ್ಲಾಪುರದಲ್ಲಿ ನಡೆದ ಸೇನಾ ಭರ್ತಿ ಕ್ಯಾಂಪ್ನಲ್ಲಿ ಹೋಗಿ ಅಲ್ಲಿಂದಲೇ ಆಯ್ಕೆಯಾದ ಹುಸೇನ್ ಗಜಾಕೋಶ ಅಂದಿನಿಂದ ಇಂದಿನವರೆಗೂ ಸೇನೆಯನ್ನೇ ನಂಬಿ ಕೆಲಸ ಮಾಡಿದವರು.
ಸುಬೇದಾರರಾಗಿ ಹೆಸರುವಾಸಿ: ಅವರ ಈ ಸೇವಾಕಾರ್ಯವನ್ನೇ ಮೆಚ್ಚಿ, ಪ್ರಾಮಾಣಿಕತೆಯನ್ನು ಕಂಡು ಮಿಲಿಟರಿ ಅಧಿಕಾರಿಗಳು, ಅಲ್ಲಿನ ಕಾಯ್ದೆಗಳಡಿಯಲ್ಲಿ 28 ವರ್ಷಗಳಲ್ಲಿ ನಾಲ್ಕುಸಲ ಬಡ್ತಿಗಳನ್ನು ಹೊಂದಿ ಎರಡು ಸ್ಟಾರ್ಗಳನ್ನು ಪಡೆದು ಸುಬೇದಾರರಾಗಿ ಆರ್ಮಿಯಲ್ಲಿ ಹೆಸರು ವಾಸಿಯಾಗಿದ್ದರು.
ಜುಲೈ 31, 2013 ರಂದು ಸೇವಾ ನಿವೃತ್ತರಾಗಿರುವ ಅಶೋಕ ಆ.2 ರಂದು ತಾಯ್ನಾಡು ಕರ್ನಾಟಕದ ಮಣ್ಣೂರಿಗೆ ಆಗಮಿಸುತ್ತಿದ್ದಾರೆ.
ಊರಲ್ಲಿ ಹಬ್ಬದ ವಾತಾವರಣ: ಅಂದು ಮಣ್ಣೂರು ಗ್ರಾಮದಲ್ಲಿ ಹಲವಾರು ಸಂಘ ಸಂಸ್ಥೆಗಳ ಅಭಿಮಾನಿಗಳು ಬಂಧು- ಬಳಗದವರು ಅವರ ಬರುವಿಕೆಯ ಸಂತೋಷದಿಂದ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳುತ್ತಾ ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿರುವರು. ಕುಟುಂಬದಲ್ಲಿನ ನಾಲ್ಕು ಜನ ಅಣ್ಣ ತಮ್ಮಂದಿರಲ್ಲಿ ಹಿರಿಯರಾದ ಹುಶೇನಿ ಮಾರುತಿಯವರು ಆರ್ಮಿ ಸೇವೆಯಲ್ಲಿ ಸೈನಿಕನಾಗಿ ಹೋಗಿ ಸುಬೇದಾರ್ ಆಗಿ ನಿವೃತ್ತರಾದವರು. ಹುಶೇನಿ ಮಾರುತಿ ಗಜಾಕೋಶ ಅವರು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಯ ಅಫಜಲ್ಪುರ ತಾಲೂಕಿನ ಕೊನೆಯ ಗ್ರಾಮ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದಲ್ಲಿ ಬರುವ ಮಣ್ಣೂರು ಗ್ರಾಮದ ಬಡತನದ ಕುಟುಂಬದವರು.
ಬಡತನದಿಂದ ನರಳುತ್ತಿದ್ದ ಗಜಾಕೋಶ ಅವರ ಕುಟುಂಬದ ಪರಿಸ್ಥಿತಿಯು ಹೇಳತೀರದಾಗಿದೆ. ಇಂತಹ ಬಡತನದಲ್ಲಿ ಬೆಂದು ಹೋಗಿರುವರು ಇಂತಹ ಪರಿಸ್ಥಿತಿಯಲ್ಲಿ ತನ್ನ ಕುಟುಂಬವನ್ನು ಸುಧಾರಿಸಿಕೊಳ್ಳಲು ಮಣ್ಣೂರು ಗ್ರಾಮದ ಎಲ್ಲಮ್ಮದೇವಿಯ ಆಶೀರ್ವಾದದಿಂದ ಆರ್ಮಿಯಲ್ಲಿ ಸೈನಿಕನಾಗಿ ಸೇರಿದ ಹುಸೇನ್ ಇವರು ಕುಟುಂಬದ ಸದಸ್ಯರ ಶುಭಾಶಯಗಳೊಂದಿಗೆ ಸೇವೆ ಪೂರ್ತಿ ಉತ್ತಮರಾಗಿ ಹೆಸರು ಗಳಿಸಿದ್ದು ವಿಶೇಷ.
ಸರ್ವರ ಮೆಚ್ಚುಗೆಗೆ ಪಾತ್ರ: ಇವರ ಸಹೋದರರಾದ ಅಶೋಕ, ಮನೋಹರ ಮತ್ತು ಭಾಗಣ್ಣ ಇವರು ಕೂಡಾ ಊರಲ್ಲಿ ಒಳ್ಳೆಯ ನಡತೆಉಳ್ಳವರಾಗಿದ್ದು, ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಮೇಶ ಧೂಳಪ್ಪ ಬಾಕೆ, ಗ್ರಾಪಂ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಭಿಮಾಶಂಕರ್ ಕರೂಟಿ ಅಧ್ಯಕ್ಷರು ಎಲ್ಲಮ್ಮಾ ದೇವಿ ಟ್ರಸ್ಟ್ ಕಮಿಟಿಯು ಹಾಗೂ ವರ್ಗದವರು ಎಲ್ಲ ಯುವಕ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಂಘದ ಸದಸ್ಯರು ಮತ್ತು ನಾಗರಾಜ ಕಂಬಾರ ಸೈಫಾನ್ ಬಾಗಲಕೋಟ, ಭೀಮಾಶಂಕರ ಹಳಿಮನಿ ಮತ್ತು ಸೋದರ ಮಾವನಾದ ಶಿವಣ್ಣ .ಜಿ ನಾರಾಯಣಕರ (ಪೋಲಿಸ್ ಇಲಾಖೆ) ಜಗದೀಶ ನಾರಾಯಣಕರ್ ಪಿಡಬ್ಲ್ಯೂಡಿ ಎ.ಇ. ದಯಾನಂದ ನಾರಾಯಣಕರ್ ಅಂದು ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ವಿಕೆಜಿ ಮಹಿಳಾ ವೆಲ್ಫೆರ್ ಸೊಸೈಟಿ ಕಾರ್ಯದರ್ಶಿ ಶಿವಶರಣಪ್ಪ ಕೇಶಣ್ಣಾ ಬೋರುಟಿ ಇವರೆಲ್ಲರೂ ಹುಸೇನ್ ಗಜಾಕೋಶರ ಸೇನಾ ಸೇವೆಯನ್ನು ಕೊಂಡಾಡಿದ್ದಾರೆ.