ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸೂಗೂರ ಕರೆ

Rashmi Kasaragodu
Updated On : 2 Aug 2013, 11:55 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಆ.1
ಗ್ರಾಮೀಣ ಭಾಗದ ಮಹಿಳೆಯರು ಕೇವಲ ಕಾಟಾಚಾರಕ್ಕೆ ಸಂಘಗಳನ್ನು ಸ್ಥಾಪಿಸಿಕೊಳ್ಳದೆ ಅದರಿಂದ ಆರ್ಥಿಕವಾಗಿ ಸದೃಢರಾಗಿ ಸ್ವಯಂ ಸಂಘಟಿತರಾಗಬೇಕೆಂದು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ರತೇಂದ್ರನಾಥ ಸೂಗೂರ ಕರೆ ನೀಡಿದರು.
  ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಗುಲ್ಬರ್ಗ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆಯ ಸಹಯೋಗದಲ್ಲಿ ಅಫಜಲ್ಪುರ ತಾಲೂಕಿನ ಹೊಸೂರ ಹಾಗೂ ಉಪ್ಪಾರವಾಡಿ ಗ್ರಾಮಗಳ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಏರ್ಪಡಿಸಿರುವ 7ದಿನಗಳ ಉದ್ಯಮ ಶೀಲತಾ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
  ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಜಲಾನಯನ ಇಲಾಖೆ ಮತ್ತು ವಿಶ್ವ ಸೇವಾ ಮಿಷನ್ ಸಂಸ್ಥೆ ಯಾವಾಗಲು ನಿಮ್ಮೊಂದಿಗಿರುತ್ತವೆ. ಆದ್ದರಿಂದ ನೀವು ಉತ್ತಮವಾದ ತರಬೇತಿಯನ್ನು ಪಡೆದು ಸ್ವಯಂ ಉದ್ಯೋಗಿಗಳಾಗಿ ಎಂದು ಕರೆ ನೀಡಿದರು.
  ವಿಶ್ವ ಸೇವಾ ಮಿಷನ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಮೊದಲು ಉತ್ತಮವಾದ ಕೆಲಸವನ್ನು ಮಾಡಲು ಒಂದು ಒಳ್ಳೆಯ ಸಂಕಲ್ಪವನ್ನು ಮಾಡಬೇಕು. ಆ ಸಂಕಲ್ಪವೇ ಬದುಕನ್ನು ರೂಪಿಸುತ್ತದೆ ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಸಂಯೋಜಕರಾದ ಸಿದ್ದಲಿಂಗ ಮಾಚನಳ್ಳಿ, ಯೋಜನಾ ಸಂಯೋಜಕರಾದ ಬಾಬು ಕನ್ನೂರ್, ಸಂಪನ್ಮೂಲ ವ್ಯಕ್ತಿಗಳಾದ ಸವಿತಾಸಿಂಗ್, ತಾರಾಮತಿ ಶಹಾಬಾದಿ, ಸುರೇಖಾ ಪವಾರ, ವಿಶ್ವ ಸೇವಾ ಮಿಷನ್ ಸಿಬ್ಬಂದಿ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರು ಇದ್ದರು. ಮರೆಪ್ಪ ಸ್ವಾಗತಿಸಿ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement