ವಿಶ್ವಕರ್ಮ ಅಭಿವೃದ್ಧಿ ಸಂಘದ ಉದ್ಘಾಟನೆ
ಅಫಜಲ್ಪುರ: ಕುಶಲ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಂಘಟಿತರಾಗಬೇಕು ಎಂದು ಮೌನೇಶ್ವರ ಸ್ವಾಮೀಜಿ ಕರೆ ನೀಡಿದರು. ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ನೂತನ ಕುಶಲ ಕಾರ್ಮಿಕರ ವಿಶ್ವಕರ್ಮ ಅಭಿವೃದ್ಧಿ ಸಂಘದ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮಾಜ ಕಾಯಕದ ಮೂಲಕ ನಾನಾ ಕಲೆಗಳನ್ನು ಚಿತ್ರಿಸಿ, ಕೆತ್ತಿಸಿ ಬದುಕು ರೂಪಿಸಿಕೊಂಡ ಸಮಾಜವಾಗಿದೆ ಎಂದರು. ಮುಖಂಡರಾದ ಪ್ರಕಾಶ ಬಡಿಗೇರ, ಗುರುದೇವಯ್ಯ, ಜಗದೀಶ ಪತ್ತಾರ, ಸಂಘದ ಅಧ್ಯಕ್ಷ ಮಹಾಂತೇಶ ಬಡಿಗೇರ, ಇಬ್ರಾಹಿಂ ಬೇಗ್, ಚಂದು ಮಣ್ಣೂರ, ಮೌನೇಶ ಸುತಾರ, ಮಹಾಂತಪ್ಪ ಬಡಿಗೇರ, ನಿರಂಜನ, ಪ್ರಕಾಶ ಬಡಿಗೇರ, ಶರಣಪ್ಪ ಬಡಿಗೇರ, ರಮೇಶ ಇದ್ದರು.