ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖರ್ಗೆ ಮೂಡ್ ಆಫ್...

Rashmi Kasaragodu
Updated On : 3 Aug 2013, 11:55 am

ಗುಲ್ಬರ್ಗ: ಸಮಾರಂಭಕ್ಕೆ ನೀರಿಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಾರಣ ವಾಡಿ ಜಂಕ್ಷನ್ನ ಪ್ಲಾಟ್ಫಾರ್ಮ್ 1 ಮತ್ತು 2ರ ಮಧ್ಯೆ ಇರುವ ಇಕ್ಕಟ್ಟಾದ ಸ್ಥಳದಲ್ಲೇ ಶುಕ್ರವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ರೇಲ್ವೆ ಮಾರ್ಗ ವಿದ್ಯುದ್ದೀಕರಣ ಯೋಜನೆ ಚಾಲನಾ ಸಮಾರಂಭ ಜನರ ವಾಕ್ಸಮರ, ಗಲಾಟೆ- ಗೊಂದಲದಲ್ಲೇ ನಡೆದುಹೋಯ್ತು.
ವಿಶೇಷ ರೈಲಲ್ಲಿ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಬಂದ ರೇಲ್ವೆ ಸಚಿವರು ವೇದಿಕೆಗೆ ಬರುವಷ್ಟರಲ್ಲೇ ನೂರಾರು ಸಂಖ್ಯೆಯಲ್ಲಿ ಜನತೆ ಸೇರಿದ್ದರು. ವೇದಿಕೆಯಲ್ಲೇ ಜನ ಮುಗಿಬಿದ್ದದ್ದು ಕಂಡು ಖರ್ಗೆಯವರೇ ಕೆಂಡಾಮಂಡಲ. ಸಮಾರಂಭದಲ್ಲಿ ಶಿಸ್ತು ಸದಾ ಬಯಸುವ ಖರ್ಗೆಯವರು ಅಲ್ಲಿನ ಅಶಿಸ್ತು ಕಂಡು ಮೂಡ್ ಆಫ್. ಕೈ ಮಾಡುತ್ತಲೇ ಬಂದ ಖರ್ಗೆಯವರು ಒಂದು ಹಂತದಲ್ಲಿ ಅಲ್ಲೇ ನಿಂತಿದ್ದ ನೂರಾರು ಸಂಖ್ಯೆಯ ಭದ್ರತಾ ಸಿಬ್ಬಂದಿಗೆ ಉದ್ದೇಶಿಸಿ ಜನರನ್ನು ಶಿಸ್ತಾಗಿ ಕುಳ್ಳಿರಿಸಿ ಎಂದು ಹೇಳಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement