ಸೀಮಾಂಧ್ರ ಹೋರಾಟದ ಕರಿನೆರಳು
ಗುಲ್ಬರ್ಗ: ತೆಲಂಗಾಣಾ ರಾಜ್ಯ ರಚನೆಯಿಂದಾಗಿ ಸೀಮಾಂಧ್ರದಲ್ಲಿ ಉದ್ಭವವಾಗಿರುವ ಹೋರಾಟದ ಕರಿನೆರಳು ಬಸ್ಸುಗಳ ಜೊತೆಗೆ ರೈಲು ಸಂಚಾರದ ಮೇಲು ಬಿದ್ದಿದೆ. ಸೀಮಾಂದ್ರ ಪ್ರದೇಶದ ಕರ್ನೂಲ್, ಅನಂತಪುರ ಭಾಗದಲ್ಲಿ ರೈಲು ಸಂಚಾರಕ್ಕೆ ಹೋರಾಟಗಾರರು ತಡೆ ಒಡ್ಡುತ್ತಿದ್ದಾರೆಂದು ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹಗಲು ಹೊತ್ತಿನ ರೈಲು ಸಂಚಾರಕ್ಕೆ ಅಡಚಣೆ ಇದೆ, ಆದರೆ ರಾತ್ರಿ ಹೊತ್ತಿನ ರೈಲುಗಳ ಸಂಚಾರ ಯಾವುದೇ ಅಡಚಡೆ ಇಲ್ಲದೆ ಸಾಗಿದೆ. ಹೋರಾಟದ ತೀವ್ರತೆಯನ್ನು ಗಮನಿಸಲಾಗುತ್ತಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಹೋರಾಟದ ಬೆಳವಣಿಗೆಗಳನ್ನು ಗಮನಿಸಿಯೇ ರೈಲುಗಳ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದಾರೆಂದು ಖರ್ಗೆ ಹೇಳಿದ್ದಾರೆ.