ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಪಘಾತ: ನಾಲ್ವರಿಗೆ ಗಾಯ

Mainashree
Updated On : 4 Aug 2013, 12:12 pm

ಚಿಂಚೋಳಿ: ತಾಲೂಕಿನ ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಚಮಾಸಾಗರ ಗ್ರಾಮದ ಬಳಿ ಬುಧವಾರ ಸಂಜೆ ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಒಬ್ಬ ಪೊಲೀಸ್ ಪೇದೆ ಸೇರಿದಂತೆ ಮೂರು ಜನ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗುಲ್ಬರ್ಗ ನಗರದ ಸ್ಟೇಷನ್ ಬಜಾರ ಪೊಲೀಸ್ ಠಾಣೆ ಪೇದೆ ವೆಂಕಟೇಶ ಮತ್ತು ಆತನ ಗೆಳೆಯ ನಾಗೇಶನೊಂದಿಗೆ ದ್ವಿಚಕ್ರ ವಾಹನದಲ್ಲಿ ಕರ್ತವ್ಯ ಮೇಲೆ ಜಹೀರಾಬಾದ್ ಮೂಲಕ ಕುಂಚಾವರಂ ಗ್ರಾಮಕ್ಕೆ ಬರುವಾಗ ಲಚಮಾಸಾಗರ ಗ್ರಾಮದ ಬಳಿ ಎದುರಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ತಲೆ ಮತ್ತು ಕೈಕಾಲುಗಳಿಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಪೇದೆ ವೆಂಕಟೇಶ, ನಾಗೇಶ ಮತ್ತು ಇನ್ನೊಂದು ದ್ವಿಚಕ್ರ ವಾಹನದ ಸವಾರ ಜವಾಹರ ನಗರ ತಾಂಡಾದ ವಿಠ್ಠಲ್ ಎಂಬುವವರಿಗೆ ಬೀದರ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಈ ಕುರಿತು ಪ್ರಕರಣದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement