ಕಿರುಕುಳ: ಗೃಹಿಣಿ ಆತ್ಮಹತ್ಯೆ
ಚಿಂಚೋಳಿ: ತಾಲೂಕಿನ ಸುಲೇಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಕೋಡ ಗ್ರಾಮದಲ್ಲಿ ಗೃಹಿಣಿ ಗಂಡನ ಕಿರುಕುಳ ತಾಳದೇ ಮನೆಯಲ್ಲಿ ಕೀಟ ನಾಶಕ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.
ಮಹೊಬೂಬಿ ಗಂಡ ಮೈನೋದ್ದೀನ್ ಮುಲ್ಲಾನೋರ (30) ಮೃತಳು.
ಮೃತಳ ಗಂಡ ಮೈನೋದ್ದೀನ್ ದಿನಾಲು ಕುಡಿದು ಬಂದು ಹೊಡೆಯುವುದು ಮತ್ತು ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ಬೇಸತ್ತು ಬುಧವಾರ ಮನೆಯಲ್ಲಿಟ್ಟಿದ್ದ ಕೀಟನಾಶಕ ಗುರುವಾರ ಬೆಳಿಗ್ಗೆ ಸೇವಿಸಿದ್ದಳು. ಕೂಡಲೇ ಅವಳನ್ನು ಸೇಡಂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಶುಕ್ರವಾರ ಮೃತಪಟ್ಟಿದ್ದಾಳೆ. ಮೃತಳ ತಂದೆ ನೀಡಿದ ದೂರಿನ ಮೇರೆಗೆ ಗಂಡ ಮತ್ತು ಅತ್ತೆ ಮಾಲನಬೀ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಂಡ ಮತ್ತು ಅತ್ತೆ ಪರಾರಿಯಾಗಿದ್ದು, ಈ ಕುರಿತು ಪ್ರಕರಣ ಸುಲೇಪೇಟ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಸೋಮಶೇಖರರೆಡ್ಡಿ ಕೆಂಚರೆಡ್ಡಿ ತಿಳಿಸಿದ್ದಾರೆ.