ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಂಚ ಸಾಧಕ ಸಾಹಿತಿಗಳಿಗೆ ಡಿವಿಜಿ ಪ್ರಶಸ್ತಿ

Mainashree
Updated On : 4 Aug 2013, 12:13 pm

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜು.3
ನಗರದ ಎಸ್‌ಎಸ್‌ಎಲ್ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನವು ಆಯೋಜಿಸಿದ್ದ ಸಮಾರಂಭದಲ್ಲಿ ಪಂಚ ಸಾಧಕ ಸಾಹಿತಿಗಳಿಗೆ ಡಿವಿಜಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್, ಹಿರಿಯ ಸಾಹಿತಿ ಪ್ರೊ. ಸೂಗಯ್ಯ ಹಿರೇಮಠ, ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ, ಸೇಡಂನ ಸಾಹಿತಿ ಶೋಭಾದೇವಿ ಚಕ್ಕಿ ಮತ್ತು ಹುಮನಾಬಾದ್‌ನ ಸಾಹಿತಿ ಡಾ. ಗವಿಸಿದ್ದಪ್ಪ ಎಚ್. ಪಾಟೀಲ್ ಅವರಿಗೆ ಡಿವಿಜಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುವ ಪೀಳಿಗೆಗೆ ತಲುಪಲಿ: ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಡಿವಿಜ ಅವರು ಒಬ್ಬ ಸತ್ಪಶಾಲಿ ಬರಹಗಾರ, ಪತ್ರಕರ್ತ ಹಾಗೂ ನಾಡು ಕಂಡ ಅಪ್ಪಟ ಸ್ವಾಭಿಮಾನಿ ಸಾಹಿತಿ ಎಂದರು.
ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ಪರಸಂಸ್ಕೃತಿಯ ಹಾವಳಿಯನ್ನು ತಡೆಯಲು ವಚನಾಮೃತ ಸವಿ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಸರ್ವ ಸಮಾನತೆಯ ಸೂತ್ರಗಳು ಬಸವಾದಿ ಶರಣರ ಬದುಕು- ಬರಹದಲ್ಲಿವೆ ಎಂದು ನುಡಿದರು.
ಸಮಾಜ ಪರಿವರ್ತನೆಗೆ ನಾಂದಿಯಾಗಲಿ: ಹಿರಿಯ ಸಾಹಿತಿ ಡಾ. ಮ.ಗು. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸ್ವಯಂ ತೃಪ್ತಿಯ ಜೊತೆಗೆ ಸಮಾಜ ಪರಿವರ್ತನೆಗೆ ನಾಂದಿಯಾಗಬೇಕು. ಪ್ರಶಸ್ತಿಗಳಿಂದ ವ್ಯಕ್ತಿತ್ವವನ್ನು ಅಳೆಯಲಾಗದು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಕೋಣಿನ ಮಾತನಾಡಿದರು. ಜಂಬಣ್ಣಗೌಡ ಶೀಲವಂತ, ಬಸವರಾಜ ಕೋನೆಕ್, ಎ.ಕೆ. ರಾಮೇಶ್ವರ, ಗವೀಶ ಹಿರೇಮಠ, ಶಾಂತಾ ಪಸ್ತಾಪುರ್, ಪ್ರೊ. ಶಿವರಾಜ ಪಾಟೀಲ್, ಡಾ. ಎಸ್.ಎಸ್. ಗುಬ್ಬಿ, ಚನ್ನಬಸಪ್ಪ ಚಾಕಾ, ವಿಲಾಸ ಕುಲಕರ್ಣಿ, ಶಂಕರ ಬಿರಾದಾರ, ಮನೋಹರ ಪೋದ್ದಾರ್, ಡಾ. ವಾಸುದೇವ ಸೇಡಂ, ಬಿ.ಎಂ. ಪಾಟೀಲ್, ರಾಜಶೇಖರ ಮಾಳಗಿ, ಜ್ಯೋತಿ ರಾವೂರ, ಎನ್.ಸಿ. ವಾರದ, ವಿಶ್ವನಾಥ ಕಾಡಾದಿ, ಗಣ್ಯರು ಇದ್ದರು.
ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಕೆ. ಗಿರಿಮಲ್ಲ ನಿರೂಪಿಸಿದರು. ಶ್ರೀಕಾಂತಗೌಡ ತಿಳಗೂಳ ಸ್ವಾಗತಿಸಿದರು. ಶೋಭಾದೇವಿ ಚಕ್ಕಿ ಪ್ರಾರ್ಥನೆ ಗೀತೆ ಹಾಡಿದರು. ಗುಂಡಣ್ಣ ಡಿಗ್ಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement