ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರ: 23ರಂದು ಶ್ರೀನಿವಾಸ ಕಲ್ಯಾಣೋತ್ಸವ

Mainashree
Updated On : 4 Aug 2013, 12:13 pm

ಕನ್ನಡಪ್ರಭ ವಾರ್ತೆ  ಸುರಪುರ  ಆ.3
ಪಟ್ಟಣದ ಗುರುಭಜನಾ ಮಂಡಳಿ ವಿಶ್ವಸ್ಥ ಸಮಿತಿ, ಯಾಜ್ಞವಲ್ಕ್ಯ ಭಜನಾ ಮಂಡಳಿ, ವೇಣುಗೋಪಾಲ ಮಹಿಳಾ ಭಜನಾ ಮಂಡಳಿ ಸಹಯೋಗದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜಕ್ಟ್ ವತಿಯಿಂದ ಪಟ್ಟಣದ ಗರುಡಾದ್ರಿ ಕಲಾಭವನದಲ್ಲಿ ಆ.23ರಂದು ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮ ಪರಿಕ್ರಮಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಮುಖಂಡ ನಾಗಾರಾಜ ಪಾಲ್ಮೂರ್ ತಿಳಿಸಿದರು.
ಇಲ್ಲಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕಿರು ತಿರುಪತಿ ಎಂದೇ ಪ್ರಸಿದ್ಧವಾದ ಸುರಪುರದಲ್ಲಿ ತಿರುಮಲದ ವೆಂಕಟರಮಣನು ಇಲ್ಲಿಯ ಸಂಸ್ಥಾನದ ಅರಸರಿಗೆ ವೇಣುಗೋಪಾಲಸ್ವಾಮಿ ರೂಪದಲ್ಲಿ ದರುಶನ ನೀಡುವುದಾಗಿ ಅಭಯ ನೀಡಿದ್ದ. ಹೀಗಾಗಿ ಇಂದಿಗೂ ತಿರುಪತಿಯಲ್ಲಿ ಸುರಪುರದ ಪ್ರಥಮ ಪೂಜೆ ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರಥಮ ಬಾರಿಗೆ ಕಲ್ಯಾಣೋತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸುರಪುರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿ ಶ್ರೀನಿವಾಸನ ದರ್ಶನ ಭಾಗ್ಯ ಕಲ್ಪಿಸಿರುವ ಸಮಿತಿಯ ಕಾ.ರ್ ಶ್ಲಾಘನೀಯವಾದುದು ಎಂದರು.
ಈ ಸಂದರ್ಭದಲ್ಲಿ ಕೇದಾರನಾಥಶಾಸ್ತ್ರೀ ಯಾಳಗಿ, ಯಂಕಪ್ಪಚಾರ್ಯ ಬೀರನೂರು, ಗಣಪತರಾವ ಕುಲಕರ್ಣಿ ದೇವಿಕೇರಿ, ರಾಘವೇಂದ್ರ ಬಾಡಿಯಾಳ, ಶ್ರೀಹರಿರಾವ ಆದೋನಿ, ರಮೇಶ ಕುಲಕರ್ಣಿ, ಕೇಶವ ಗುಡಿ, ಕೃಷ್ಣಭಟ್ ಜೋಷಿ, ಗೋವಿಂದರಾವ ಕುಲಕರ್ಣಿ, ಶ್ರೀನಿಧಿ ಐಜಿ, ರಾಧಾಬಾಯಿ ಜೋಷಿ ಇದ್ದರು.
ಕಾರ್ಯಕ್ರಮದ ವಿವರ: ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಆಚಾರ್ಯ ಡಾ.ಪಂಡಿತ ಶ್ರೀನಿವಾಸಚಾರ್ಯ ಪದಕಿ ಇವರ ನೇತೃತ್ವದಲ್ಲಿ ಆ. 23ರಂದು ಬೆಳಗ್ಗೆ ರಾಘವೇಂದ್ರಸ್ವಾಮಿ ಮಠದಿಂದ ರಾಜ ಬೀದಿಯ ಮುಖಾಂತರ ಗರುಡಾದ್ರಿ ಕಲಾ ಮಂದಿರದವರೆಗೆ ಶ್ರೀನಿವಾಸ ದೇವರ ಭವ್ಯ ಶೋಭಾಯಾತ್ರೆ ಜರುಗಲಿದೆ.
ರಾಯರ ಮಠದಲ್ಲಿ ಅಂದು ಬೆ.5 ಗಂಟೆಗೆ ಸುಪ್ರಭಾತ, 6ಕ್ಕೆ ಸಾಮೂಹಿಕ ಭಜನೆ, 8 ಗಂಟೆಗೆ ಪಂಚಾಮೃತ ಅಭಿಷೇಕ, ಸಂಜೆ 6ಕ್ಕೆ ತಿರುವೆಂಜಾನಾಭಿಷೇಕ, 7ಕ್ಕೆ ಕಲ್ಯಾಣೋತ್ಸವದ ವೈಭವ ಜರುಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement