ದಿನದ ರಿಯಾಯ್ತಿ ಬಸ್ಪಾಸ್ಗೆ ಚಾಲನೆ
ಕನ್ನಡಪ್ರಭ ವಾರ್ತೆ , ಆಳಂದ , ಆ.4
ಗುಲ್ಬರ್ಗ ವಿಭಾಗದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಆಳಂದ ಘಟಕದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಗುಲ್ಬರ್ಗ ಮತ್ತು ಆಳಂದ ನಡುವಿನ ಸಂಚಾರ ಕೈಗೊಳ್ಳಲು ರಿಯಾಯಿತಿ ದರದಲ್ಲಿ ಬಸ್ಪಾಸ್ ವಿತರಣೆ ಯೋಜನೆ ಕಳೆದ ಮೂರು ದಿನಗಳಿಂದ ಜಾರಿಗೊಂಡಿದೆ.
ಗುಲ್ಬರ್ಗದಿಂದ ಆಳಂದ ಮತ್ತು ಆಳಂದನಿಂದ ಮರಳಿ ಗುಲ್ಬರ್ಗವರೆಗಿನ ಸಂಚಾರಕ್ಕೆ 88 ಸದ್ಯದ ಟಿಕೆಟ್ ದರ. ಆದರೆ ಸಾರಿಗೆ ಸಂಸ್ಥೆಯೂ ಪ್ರಯಾಣಿಕರ ಬೇಡಿಕೆ ಸ್ಪಂದಿಸಿ 65 ರುಪಾಯಿಗೆ ಒಂದು ದಿನದ ರಿಯಾಯಿತಿ ದರದ ಪಾಸ್ ನೀಡುತ್ತಿದೆ. ಇದೇ ಪಾಸ್ನಿಂದ ಗುಲ್ಬರ್ಗ ನಗರದಲ್ಲಿ ಸಿಟಿ ಬಸ್ನಲ್ಲೂ ನಗರದೆಲ್ಲಡೆ ಪ್ರಯಾಣ ಕೈಗೊಳ್ಳಲು ಉಚಿತ ಅವಕಾಶ ಒದಗಿಸಲಾಗಿದೆ ಎಂದು ಘಟಕದ ವ್ಯವಸ್ಥಾಪಕ ಗೋಪಾಲ್ ಮೇಕಾಲೆ ಅವರು ವಿವರಣೆ ನೀಡಿದರು.
ಗುಲ್ಬರ್ಗಯಲ್ಲಿ ಶಹಾ ಬಜಾರ ನಾಕಾ ಮತ್ತು ಆಳಂದ ಬಸ್ನಿಲ್ದಾಣದಲ್ಲಿ ಬೆಳಗಿನಿಂದ ರಾತ್ರಿ 12 ಗಂಟೆವರೆಗೆ ವಾರದ ಎಲ್ಲ ದಿನಗಳಲ್ಲೂ ಪಾಸ್ ದೊರೆಯಲಿದೆ. ಪಡೆದ ಪಾಸ್ ರಾತ್ರಿ 12 ರವರೆಗೆ ಮಾನ್ಯತೆ ಇರುತ್ತದೆ. ಪ್ರಯಾಣಿಕರಿಗೆ 23 ಉಳಿತಾಯ ಜೊತೆಗೆ ಗುಲ್ಬರ್ಗ ನರಗದಲ್ಲಿನ ಸಿಟಿ ಬಸ್ನಲ್ಲೂ ದಿನವೀಡಿ ಓಡಾಡಬಹುದಾಗಿದೆ ಎಂದರು.
ಮತ್ತೊಂದು ಸೌಲಭ್ಯ: ಹೊಸದಾಗಿ ಸೋಲಾಪುರ ಆಳಂದ ಮಾರ್ಗದಿಂದ ರಾತ್ರಿ 8.30ಕ್ಕೆ ಗುಲ್ಬರ್ಗಕ್ಕೆ ಬಸ್ ಓಡಿಸಲಾಗುತ್ತಿದೆ. ರಾತ್ರಿ 9.30ಕ್ಕೆ ಉಮರಗಾನಿಂದ ಬರವ ಬಸ್ ಗುಲ್ಬರ್ಗವರೆಗೆ ಹೊಸದಾಗಿ ಸಂಚಾರ ಆರಂಭಿಸಲಾಗಿದೆ ಎಂದರು.
ಬಬಲೇಶ್ವರ, ಅಂಬಲಗಾ, ಶಿರೂರ ಗ್ರಾಮಕ್ಕೆ ಹೊಸದಾಗಿ ಬಸ್ ಸಂಚಾರ ಆರಂಭಿಸಿದ್ದು, ಲಾಡ ಚಿಂಚೋಳಿ, ವಿಕೆಸಲಗರ ಮತ್ತು ಗಾಣಗಾಪುರ ರಸ್ತೆ ಹದಗೆಟ್ಟಿದ್ದು, ಇದರಿಂದ ಬಸ್ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ ಎಂದು ಅವರು ವಿವರಿಸಿದರು. ಬಸ್ ನಿಯಂತ್ರಕ ಶರಣಪ್ಪ ಪಡಸಾವಳಿ ಇದ್ದರು.