ನಾಳೆ ವಿವಿಧ ಶಿವಾನುಭವ ಗೋಷ್ಠಿಗಳು
ಗುಲ್ಬರ್ಗ: ಯಾದಗಿರಿ ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದ ಸಂಸ್ಥಾನ ಮಠದಿಂದ ಅಮವಾಸ್ಯೆ ನಿಮಿತ್ತ ವಿವಿಧ ಶಿವಾನುಭವ ಗೋಷ್ಠಿಗಳು ನಡೆಯಲಿವೆ.
ಜು.6 ರಂದು ಯಾದಗಿರಿ ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನಲ್ಲಿ 336ನೇ ಶಿವಾನುಭವ ಗೋಷ್ಠಿ, ಜೇವರ್ಗಿ ತಾಲೂಕಿನ ಸುಕ್ಷೇತ್ರ ಶಾಖಾಪುರದ ವಿಶ್ವರಾಧ್ಯ ತಪೋವನ ಮಠದಲ್ಲಿ 226ನೇ ಶಿವಾನುಭವ ಗೋಷ್ಠಿ, ಗುಲ್ಬರ್ಗ ತಾಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿಯಲ್ಲಿ 173ನೇ ಶಿವಾನುಭವ ಗೋಷ್ಠಿ, ಶಹಾಪುರ ತಾಲೂಕಿನ ಅಪ್ಪನ ಶಾಖಾಪುರದ ಮಠದಲ್ಲಿ ಆ.11ರಂದು 154ನೇ ಶಿವಾನುಭವ ಗೋಷ್ಠಿ ನಡೆಯಲಿವೆ.
ಶಿವಾನುಭವ ಗೋಷ್ಠಿಯ ನಂತರ ರಾತ್ರಿವಿಡಿ ಸಂಗೀತ ಕಲಾವಿದರಿಂದ ವಚನ ಗಾಯನ ಮತ್ತು ಭಜನೆ ನಡೆಯುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕೆಂದು ವಿಶ್ವರಾಧ್ಯ ಸೇವಾ ಸಮಿತಿಯ ವಕ್ತಾರ ಬಸವರಾಜ ಶೀಲವಂತ ಕೋರಿದ್ದಾರೆ.