ತಾಲೂಕಿನ ಪಟುಗಳು ರಾಜ್ಯ ಮಟ್ಟದಲ್ಲಿ ಮಿಂಚಲಿ
ಆಳಂದ: ಓದಿನ ಜತೆಗೆ ಕ್ರೀಡೆಯೂ ಮುಖ್ಯ. ವಿವಿಧ ಆಟಗಳಲ್ಲಿ ಸ್ಪರ್ಧೆ ಬಯಸುವ ವಿದ್ಯಾರ್ಥಿಗಳಿಗೆ ಸೋಲು, ಗೆಲವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಸ್ಥಳೀಯ ಮಟಕಿ ರಸ್ತೆಯ ಕ್ರೀಡಾಂಗಣದಲ್ಲಿ ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ಆಯೋಜಿಸಿದ 2013- 14ನೇ ಸಾಲಿನ ತಾಲೂಕು ಮಟ್ಟದ ಪೈಕಾ ಗ್ರಾಮೀಣ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಹೆಸರು ತನ್ನಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜತೆಗೆ ಪಠ್ಯೇತರ ಕ್ರೀಡೆ ಹೆಚ್ಚು ಜನಪ್ರಿಯವಾಗಿದೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ವಿವಿಧ ಕ್ರೀಡೆಗಳನ್ನು ಆಡುವ ಮೂಲಕ ಮನೆ, ಗ್ರಾಮಕ್ಕೆ ಹೆಸರು ತರಬೇಕೆಂದರು.
ಜಿಪಂ ಸದಸ್ಯೆ ಮಂಗಲಾ ನರೋಣೆ, ಸಿದ್ದರಾಮ ಪ್ಯಾಟಿ, ತಾಪಂ ಮಾಜಿ ಉಪಾಧ್ಯಕ್ಷ ಮೋಹನಗೌಡ ಪಾಟೀಲ್, ಮುಖಂಡ ಗುರುಶರಣ ಪಾಟೀಲ್, ಮಲ್ಲಿನಾಥ ಪರೇಣಿ, ಅಯ್ಯುಬಲಿ ರೋತೆ, ರಾಮಚಂದ್ರ ಹತ್ತರಕಿ, ಬಿಇಒ ವೆಂಕಯ್ಯ ಇನಾಮದಾರ, ಶಿಕ್ಷಣ ಸಂಯೋಜಕ ಕೆ. ಬಸವರಾಜ, ದೈಹಿಕ ಶಿಕ್ಷಣಾಧಿಕಾರಿ ರಮೇಶ ಮರನೂರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಪಾಟೀಲ್, ಶಿಕ್ಷಕರಾದ ಶರಣಬಸವ ವಡಗಾಂವ, ಲಿಂಗರಾಜ ಘೋಡಕೆ, ಚಂದಾರೆಡ್ಡಿ, ಮೋಹನರೆಡ್ಡಿ, ಗುಂಡೆರಾಜ ಆಲುಗೋಡೆ, ಅರವಿಂದ ಜಾಪಾಳ, ಲಿಂಗಣ್ಣ ಪೂಜಾರಿ, ಶಿವಶರಣಪ್ಪ ಖಜೂರಿ, ಸತೀಶ ಕೊಗನೂರೆ, ಶಿವಯ್ಯ ಮಠಪತಿ ಇತರರು ಉಪಸ್ಥಿತರಿದ್ದರು.
ಸ್ವಾತಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಸಿದ್ದರಾಮ ಲೋಣಿ ಸ್ವಾಗತಿಸಿದರು. ದಸ್ತಗೀರ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ವಂದಿಸಿದರು.