ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಯಿ ಪಾಲಾದ ನವಜಾತ ಶಿಶು

Lingaraj Badiger
Updated On : 6 Aug 2013, 11:08 am

ಗುಲ್ಬರ್ಗ: ನಗರದ ಸರ್ಕಾರಿ ಆಸ್ಪತ್ರೆಯ ಶವಗಾರದ ಮುಂದಿನ ಕಸದ ತೊಟ್ಟಿಯಲ್ಲಿ ಬಿಸಾಕಿದ ನವಜಾತ ಶಿಶುವಿನ ದೇಹ ಸೋಮವಾರ ನಾಯಿ ಪಾಲಾದ ಘಟನೆ ಸಂಭವಿಸಿದೆ.
ಇಲ್ಲಿನ ಕಸದ ತೊಟ್ಟಿಯಲ್ಲಿ ಬಿದ್ದಿದ ತೊಟ್ಟಿಯಲ್ಲಿ ನಾಯಿಯೊಂದು ಕಚ್ಚಿಕೊಂಡು ಅತ್ತಿತ್ತ ಓಡಾಡುತ್ತಿದ್ದ ನೋಟ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಎಲ್ಲರೂ ಕಂಡರು.
ಆಸ್ಪತ್ರೆಯ ತ್ಯಾಜ್ಯ, ಸಾವನ್ನಪ್ಪಿದ ನವಜಾತ ಶಿಶುವಿನ ದೇಹ ಇತ್ಯಾದಿಗಳೆಲ್ಲ ಸೂಕ್ತವಾಗಿ ವಿಲೇವಾರಿ ಮಾಡಬೇಕಾಗಿದ್ದು ಆಸ್ಪತ್ರೆ ಸಿಬ್ಬಂದಿ ಕರ್ತವ್ಯ. ಆದರೆ, ಈ ಸಂದರ್ಭದಲ್ಲಿ ಸಿಬ್ಬಂದಿ ತಮ್ಮ ಕರ್ತವ್ಯ ಮರೆತಿದ್ದು, ಎದ್ದು ಕಾಣುತ್ತಿತ್ತು. ಈ ನವಜಾತ ಶಿಶುವಿನ ದೇಹ ಕಸದ ತೊಟ್ಟಿಗೆ ಸೇರಿದ್ದು ಹೇಗೆ ಎಂಬುವುದು ನಿಗೂಢವಾಗಿದೆ. ಈ ಶಿಶು ಆಸ್ಪತ್ರೆಯಲ್ಲಿ ಜನಿಸಿ, ಮರಣದ ನಂತರ ಇಲ್ಲಿ ಎಸೆಯಲಾಯಿತೋ ಅಥವಾ ಇನ್ನಾವುದೋ ಕಾರಣದಿಂದ ಕಸದ ತೊಟ್ಟಿ ಸೇರಿತ್ತೋ ಎಂಬುದು ತಿಳಿಯದಾಗಿದೆ. ಈ ಬೆಳವಣಿಗೆ ಕುರಿತಂತೆ ಜಿಲ್ಲಾ ಆಸ್ಪತ್ರೆ ಮುಖ್ಯ ಸರ್ಜನ್ ಡಾ. ಆಸೀಫ್ ಅಲಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ದೊರಕಲಿಲ್ಲ.

19ರಂದು ವಿಶ್ವ ಛಾಯಾಚಿತ್ರ ದಿನ
ಗುಲ್ಬರ್ಗ: ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಆ.19 ಮತ್ತು 20ರಂದು ನಗರದ ಜವಳಿ ಕಾಂಪ್ಲೆಕ್ಸ್ನ ಜವಳಿ ಪ್ಲಾಜಾದಲ್ಲಿ ಛಾಯಾಚಿತ್ರ ಸ್ಪರ್ಧೆ ಮತ್ತು ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಆಯೋಜಿಸಲಾಗಿದೆ. ಚೈತನ್ಯಮಯಿ ಆರ್ಟ್ ಗ್ಯಾಲರಿ, ಎನ್ಟೆಲ್ ಮೊಬೈಲ್, ಚಂದನ ಫೋಟೋ ಹೌಸ್ ಹಾಗೂ ದೃಶ್ಯ ಬೆಳಕು ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವರಕ್ಕೆ ಎ.ಎಸ್. ಪಾಟೀಲ್- 94492 91682, ಎಂ.ಎನ್.ಎಸ್. ಶಾಸ್ತ್ರೀ- 98867 96979ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement