ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಾಷೆ ಬಳಸಿದಂತೆ ಬೆಳೆಯುತ್ತದೆ: ಕರದಳ್ಳಿ

Lingaraj Badiger
Updated On : 6 Aug 2013, 11:05 am

ಶಹಾಪುರ: ಕವಿತೆ ಹೇಗೆ ಬರೆಯಬೇಕೆಂಬ ಪ್ರಶ್ನೆ ನಿಮ್ಮ ಮುಂದಿರುವ ಹಾಗೆಯೇ ನನ್ನ ಮುಂದೂ ಇತ್ತು. ಭಾಷೆಯನ್ನು ಕೇಳುತ್ತಾ, ಓದುತ್ತಾ, ಬರೆಯುತ್ತಾ ಹೋದಂತೆ ಕವನ ಬರೆಯಲು ಸಾಧ್ಯವಾಗುತ್ತದೆ. ಭಾಷೆ ಬಳಕೆಯಿಂದ ಅದರ ಬೆಳವಣಿಗೆ ಸಾಧ್ಯ ಎಂದು ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಹೇಳಿದರು. ಪಟ್ಟಣದ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ 20 ದಿನಗಳ ಕವನ ವಾಚನ ಕಮ್ಮಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಕವಿತೆಯ ಮಹತ್ವ, ಕಾವ್ಯಗಳು ಬೆಳೆದು ಬಂದ ಬಗೆ ವಿವಿರಿಸುತ್ತ ಕೆಲವು ಮಾದರಿಯ ಕವನ ವಾಚನ ಮಾಡಿದರು. ರಾಯ್ಜಾನ್ ಅಧ್ಯಕ್ಷತೆ ವಹಿಸಿದ್ದರು. ಬೆಟಗೇರಿ ಕುಲ್ಕರ್ಣಿ, ಸಿ.ಎನ್. ಹಿರೇಮಠ, ಕುಸುಮಾವತಿ, ಇಂದಿರಾ, ಶಿವಮೂರ್ತಿ ಇದ್ದರು. ಜಗನ್ನಾಥ ಸ್ವಾಗತಿಸಿದರು. ಪಿ.ಎನ್. ಹೀರೆಮಠ ನಿರೂಪಿಸಿದರು. ವೆಂಕಟ ಕುಲಕರ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement