ಆಮಿಷಕ್ಕೆ ಒಳಗಾಗದೆ ಮತ ನೀಡಿ: ದೇಸಾಯಿ
ಗುಲ್ಬರ್ಗ: ಆ. 12ಕ್ಕೆ ನಡೆಯುವ ನೌಕರರ ಸಂಘದ ಜಿಲ್ಲಾಧ್ಯಕ್ಷರ, ಖಜಾಂಚಿ ಮತ್ತು ರಾಜ್ಯ ಪರಿಷತ್ತಿನ ಸದಸ್ಯರ ಚುನಾವಣೆಯಲ್ಲಿ ಚುನಾಯಿತರಾದ ಕಾರ್ಯಕಾರಿ ಸಮಿತಿ ಸದಸ್ಯರು ಯಾವುದೇ ಆಮಿಷಕ್ಕೆ ಒಳಗಾಗದೆ ಮತ ನೀಡಿ ಎಂದು ಸಂಘದ ಹಾಲಿ ಅಧ್ಯಕ್ಷ ಬಿ.ಎಸ್. ದೇಸಾಯಿ ಮನವಿ ಮಾಡಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾನತಾಡಿ, ಮೂರು ಬಣದ ನಡುವೆ ಪೈಪೋಟಿ ನಡೆದಿದ್ದು, ತಮ್ಮ ಬಣಕ್ಕೆ 39 ಚುನಾಯಿತ ಸದಸ್ಯರು ಬೆಂಬಲ ಸೂಚಿಸಿದ್ದಾರೆ. 35 ಸದಸ್ಯರು ಮತ ಚಲಾಯಿಸಿದರೆ ಅಧ್ಯಕ್ಷರ ಆಯ್ಕೆ ಸುಲಭವಾಗಲಿದೆ ಎಂಡ ಡಿರುವ ಸದಸ್ಯರು ತಮ್ಮ ಬಣಕ್ಕೆ ಬೆಂಬಲ ಸೂಚಿಸಿ, ಅಧ್ಯಕ್ಷರ ಆಯ್ಕೆಗೆ ಮುಂದಾಗುತ್ತಿರುವುದನ್ನು ಕಂಡು ಸೋಲಿನ ಭೀತಿಯಿಂದ ಎದುರು ಬಣದ ಅಧ್ಯಕ್ಷ ಅಭ್ಯರ್ಥಿಗಳು ಅವರಿಗೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ. ಈ ಕುರಿತು ಈಗಾಗಲೇ ಎಸ್ಪಿಗೆ ದೂರು ನೀಡಿ ರಕ್ಷಣೆ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದರು.