ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಾಜಗಳ ಸಂಘಟನೆ ಮುಖ್ಯ: ಜಿ.ರಾಮಕೃಷ್ಣ

Vishwanath S
Updated On : 7 Aug 2013, 11:16 am

ಗುಲ್ಬರ್ಗ/ಶಹಾಬಾದ್: ಪ್ರಜಾಪ್ರಭುತ್ವದಲ್ಲಿ ಸಮಾಜಗಳ ಸಂಘಟನೆ ಮುಖ್ಯವಾಗಿದ್ದು, ಸಮಾಜದ ಸಂಘಟನೆಯಿದ್ದರೆ ಮಾತ್ರ ಸರ್ಕಾರ ಸೌಲಭ್ಯಗಳನ್ನು ಮನೆಯ ಬಾಗಿಲಿಗೆ ತರುತ್ತಾರೆ. ಸಂಘಟನೆ ಇಲ್ಲದಿದ್ದರೆ ಯಾವುದೇ ಸೌಲಭ್ಯ ದೊರೆಯುವುದು ದುರ್ಲಾಭ ಎಂದು ಶಾಸಕ ಜಿ. ರಾಮಕೃಷ್ಣ ಹೇಳಿದರು.
 ನಗರ ಇಂಡಿಯಾ ಸಭಾಂಗಣದಲ್ಲಿ ಡಾ. ಬಾಬು ಜಗಜೀವನರಾಮ್ 106ನೇ ಜಯಂತ್ಯುತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯುವಕರು, ವಿದ್ಯಾರ್ಥಿಗಳ ಮೇಲೆ ಸಮಾಜ ಸಂಘಟನೆ ಜವಾಬ್ದಾರಿ ಹೆಚ್ಚಿದೆ ಎಂದರು.
  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭಾಗಣಗೌಡ ಸಂಕನೂರ ಕಾರ್ಯಕ್ರಮ ಉದ್ಘಾಟಿಸಿದರು. ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ಗುಲ್ಬರ್ಗ ಸ್ನಾತಕೋತ್ತರ ಕೇಂದ್ರದ ಡಾ. ಶರಣಪ್ಪ ಮಾಳಗಿ ಡಾ. ಜಗಜೀವನರಾಂ ಬಗ್ಗೆ ಉಪನ್ಯಾಸ ನೀಡಿದರು.
  ಡಾ.ರಶೀದ್, ಸಂತೋಷಕುಮಾರ್, ಯಾಕೂಬ್, ನಿಂಗಣ್ಣ ದೇವಕರ್, ಶರಣಪ್ಪ, ಬಾಬು ಅಜಲಾಪುರ, ಜೈಯಮಂಗಳ, ಸಾಯಬಣ್ಣ ಹೋಳಿ, ಗುರುನಾಥ ನಿಂಗಪ್ಪ, ಶಾಂತಾಬಾಯಿ, ಉಮಾದೇವಿ, ಮರೆಮ್ಮ, ಎನ್.ಸಿ. ವಾರದ, ಸುಭಾನಿ ಕರದಳ್ಳಿ, ಡಾ. ಅಹ್ಮದ್ ಪಟೇಲ್, ರಾಜು ಮೇಸ್ತ್ರಿ, ರಾಜೇಶ ಯನಗುಂಟಿಕರ್ ಉಪಸ್ಥಿತರಿದ್ದರು. ಭೀಮರಾಯ ಅಧ್ಯಕ್ಷತೆ ವಹಿಸಿದ್ದರು. ರಾಮಸ್ವಾಮಿ ಗಿರಿಕರ್ ಪ್ರಾಸ್ತಾವಿಕ ಮಾತನಾಡಿದರು. ಶಿವಯೋಗಿ ಓಣಿ ಕಾರ್ಯಕ್ರಮ ನಿರೂಪಿಸಿದರು.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಗುಲ್ಬರ್ಗ: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ವಾಡಿ ರೇಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಗೌಡಗಾಂವ್ ರೇಲ್ವೆ ನಿಲ್ದಾಣದ ಹತ್ತಿರ ನಡೆದಿದೆ. 30 ವರ್ಷದ ವಯಸ್ಸಿನವನಾಗಿದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಹಳದಿ ಮಿಶ್ರಿತ ಕಾಟನ್ ಶರ್ಟ್ ಧರಿಸಿದ್ದು, ಈತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ವಾಡಿ ರೇಲ್ವೆ ಪೊಲೀಸ್ ಠಾಣೆ ದೂ. 08476- 202244ಗೆ ಸಂಪರ್ಕಿಸಲು ಕೋರಲಾಗಿದೆ. ವಾಡಿ ರೇಲ್ವೆ ಪೊಲೀಸ್ ಠಾಣೆ ಮುಖ್ಯ ಪೇದೆ ಡಿ.ಪಿ. ಬಾರಾಟೆಕ್ಕಿ, ಪೇದೆ ಸದಾಶಿವ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement