ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಂಜನೇಯ ದೇವಸ್ಥಾನದ ಸುತ್ತ ನೀರು

Vishwanath S
Updated On : 8 Aug 2013, 12:05 pm

ಕನ್ನಡಪ್ರಭ ವಾರ್ತೆ ,  ಸಿಂಧನೂರು ,  ಆ.7
ತಾಲೂಕಿನ ಕೆಂಗಲ್ ಹತ್ತಿರದ ತುಂಗಭದ್ರಾ ನದಿಯ ಪಕ್ಕದಲ್ಲಿರುವ ತಿಡಿಗೋಳ ಆಂಜನೇಯ ದೇವಸ್ಥಾನಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ದೇವಸ್ಥಾನದ ಸುತ್ತ ನೀರು ಸುತ್ತುವರೆದಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ನದಿಗೆ ನೀರು ಹರಿಬಿಡುತ್ತಿದ್ದು, ನದಿ ಪಾತ್ರ ಹಳ್ಳಿಗರಲ್ಲಿ ಆತಂಕ ಎದುರಾಗಿದೆ. ಕಳೆದ ವಾರದಿಂದ ಮಲೆನಾಡು ವ್ಯಾಪ್ತಿಯಲ್ಲಿ ಭಾರೀ ಮಳೆ ಬೀಳುತ್ತಿರುವುದರಿಂದ ತುಂಗಭದ್ರ ಜಲಾಶಯದ ಒಳಹರಿವು ಹೆಚ್ಚಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ನೀರು ಹರಿಸುತ್ತಿರುವ ಸುದ್ದಿ ತಿಳಿದ ರೈತರ ಮುಂಜಾಗೃತಾ ಕ್ರಮವಾಗಿ ತಮ್ಮಲ್ಲೇ ಪಂಪ್‌ಸೆಟ್‌ಗಳನ್ನು ಬಿಚ್ಚಿ, ಸ್ಥಳಾಂತರಕ್ಕೆ ಮುಂದಾಗುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ರೈತರು ಆತಂಕಕ್ಕೊಳಗಾಗಿದ್ದಾರೆ.
ನಿರಂತರವಾಗಿ 1.60 ಲಕ್ಷ ಕ್ಯುಸೆಕ್ ನೀರು ಹರಿಬಿಡುತ್ತಿರುವುದರಿಂದ ನದಿ ಪಾತ್ರಗಳಲ್ಲಿರುವ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ. ಭತ್ತದ ಗದ್ದೆಗಳು, ಕಬ್ಬಿನ ಹೊಲಗಳು ನೀರು ಪಾಲಾಗಿವೆ. ಧಡೇಸೂಗೂರು ಹತ್ತಿರದ ಕಳೆದ ಹಲವು ದಿನಗಳಿಂದ ನದಿಗೆ ನೀರು ಹರಿದು ಬರುತ್ತಿರುವ ಪರಿಣಾಮ ರೈತರು ಪಂಪ್‌ಸೆಟ್ ತೆಗೆದು ಹಾಕಿದ್ದರಿಂದ 600ಕ್ಕೂ ಅಧಿಕ ಎಕರೆ ನಾಟಿ ಮಾಡಿದ ಭತ್ತ ಒಣಗಿ ಹೋಗಿದ್ದು, ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಕೆಂಗಲ್, ದಢೇಸೂಗುರು, ಭೈರೇಶ್ವರಿಕ್ಯಾಂಪ್, ಉಪ್ಪಳ ಮತ್ತಿತರರ ಗ್ರಾಮಗಳಿಗೆ ನೀರು ಬರುವ ಆತಂಕ ರೈತರಲ್ಲಿ ಮನೆ ಮಾಡಿದೆ.
ತಗ್ಗಿದ ಪ್ರವಾಹ; ನೆಮ್ಮದಿ
ರಾಯಚೂರು: ತುಂಗಭದ್ರಾ ಮತ್ತು ಕೃಷ್ಣಾ ನದಿಯಲ್ಲಿ ನೀರಿನ ಪ್ರವಾಹ ತಗ್ಗಿದ್ದು, ನದಿ ತೀರದ ನಿವಾಸಿಗಳಲ್ಲಿ ಉಂಟಾಗಿದ್ದ ಆತಂಕ ಮರೆಯಾಗಿ ನೆಮ್ಮದಿ ತಂದಿದೆ. ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯದಿಂದ ಹೊರ ಹರಿಸಲಾಗುತ್ತಿದ್ದ ನೀರಿನ ಪ್ರಮಾಣ ತಗ್ಗಿಸಿದ್ದರಿಂದ ನದಿಯಲ್ಲಿ ಹರಿವು ಕಡಿಮೆಯಾಗಿದೆ. ಅದರಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರಿಟ್ಟಿದ್ದಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದಲ್ಲಿಯೂ ತುಂಗಭದ್ರಾ ನದಿಯಲ್ಲಿನ ನೀರಿನ ಹರಿವು ಇಳಿಕೆಯಾಗಿ ಭಕ್ತರಲ್ಲಿ ನೆಮ್ಮದಿ ತಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement