ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಲಕಾವಟಗಿ ಪ್ರೌಢಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

Vishwanath S
Updated On : 8 Aug 2013, 12:05 pm

ಮುದಗಲ್: ಇತ್ತೀಚೆಗೆ ನಡೆದ ನಾಗರಹಾಳ ಪ್ರೌಢಶಾಲಾ ಶೈಕ್ಷಣಿಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಲಕಾವಟಗಿ ಪ್ರೌಢಶಾಲೆ ಕ್ರೀಡಾಪಟುಗಳು ಬಾಲಕರ ಕಬಡ್ಡಿ ಹಾಗೂ ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು 1000 ಮೀಟರ್ ಮತ್ತು 3000 ಮೀಟರ್ ಓಟದಲ್ಲಿ ನಾಗರಾಜ, 1500 ಮೀಟರ್ ಓಟದಲ್ಲಿ ಹುಲಗಪ್ಪ ಪ್ರಥಮ ಸ್ಥಾನ ಪಡೆದು, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಕಬಡ್ಡಿ, ವಾಲಿಬಾಲ್, 3000 ಮೀಟರ್ ಓಟ, 1500 ಮೀಟರ್ ಓಟದಲ್ಲಿ ಶಾಲೆಯ ಕ್ರೀಡಾಪಟುಗಳು ದ್ವಿತೀಯ ಸ್ಥಾನ ಪಡೆದು ಪ್ರೌಢಶಾಲೆಗೆ ಕೀರ್ತಿಯನ್ನು ತಂದಿರುವುದಕ್ಕೆ ಶಾಲೆ ಮುಖ್ಯಗುರುಗಳು ವೈಎಚ್. ಚೂರಿ, ಎಸ್‌ಡಿಎಂಸಿ ಪದಾಧಿಕಾರಿಗಳು, ದೈಹಿಕ ಶಿಕ್ಷಕ ವೈ.ಎಸ್. ತೆಗ್ಗಿ ಟೀಂ ಮ್ಯಾನೇಜರ್ ರಮೇಶ ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ಗ್ರಾಮದ ಗಣ್ಯರು ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement