ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂಗಳಗಿ ಜನತೆಯ ಋಣ ತೀರಿಸುವೆ: ಶಾಸಕ

Vishwanath S
Updated On : 9 Aug 2013, 11:57 am

ಶಹಾಪುರ: ಗ್ರಾಮದ ಜನತೆಯ ಪ್ರಿತಿ ವಿಶ್ವಾಸ, ಆಶೀರ್ವಾದ ನಮ್ಮ ಮೇಲೆ ಸಂಪೂರ್ಣ ವಿದ್ದು, ಸಮಸ್ತ ಜನತೆಯ ಋಣ ತೀರಿಸುವುದು ನನ್ನ ಮುಖ್ಯ ಕರ್ತವ್ಯ. ಗ್ರಾಮದ ಮೂಲಸೌಕರ್ಯ ಅಭಿವೃದ್ಧಿ ನನ್ನ ಆದ್ಯತೆ ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
  ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಸಮಸ್ಥ ಗ್ರಾಮಸ್ಥರ ಪರವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮದ ರಸ್ತೆಗಳು ಸುಧಾರಣೆಯಾಗಬೇಕು, ಮಹಿಳೆಯರಿಗೆ ಶೌಚಾಲಯ, ಪ್ರತಿಯೊಬ್ಬರಿಗೂ ಆದ್ಯತೆಗನುಸಾರವಾಗಿ ಪಡಿತರಚೀಟಿ, ಆರೋಗ್ಯ ಭಾಗ್ಯದ ಕುರಿತು ಕಾಳಜಿ ಪ್ರಸ್ತುತ ಸ್ಥಿತಿಯಲ್ಲಿ ಅವಶ್ಯಕತೆಯಿದ್ದು, ಜನತೆ ಭರವಸೆಯನ್ನು ಹುಸಿಗೊಳಿಸದೆ ಸರ್ಕಾರದಿಂದ ಹೆಚ್ಚು ಹೆಚ್ಚು ಅನುದಾನ ಕ್ರೂಢಿಕರಿಸುವ ಮೂಲಕ ಬದಲಾವಣೆ ತರುವೆ ಎಂದರು.
ಸರ್ಕಾರದ ಗಮನಕ್ಕೆ: ಮಳೆಗಾಲದ ದಿನಗಳಿದ್ದರೂ ಸಂಪೂರ್ಣ ಮಳೆ ಕೊರತೆ ಕಾಡುತ್ತಿದೆ. ಕೆಲವೆಡೆ ನೀರಾವರಿ ಸೌಲಭ್ಯವಿದ್ದು ಇನ್ನೂ ಕೆಲವಡೆ ನೀರು ತಲುಪದೆ ಬೆಳೆಗಳು ಬಾಡುತ್ತಿವೆ. ಈ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿ,  ಸಣ್ಣ ವಯಸ್ಸಿನಲ್ಲಿ ಅತ್ಯಂತ ದೊಡ್ಡ ಜವಾಬ್ದಾರಿ ನೀಡಿದ ಮತದಾರರು ನಿಮ್ಮವರೆಂದು ತಿಳಿದು ಕಷ್ಟ ಸುಖಗಳನ್ನು ಹಂಚಿಕೊಳ್ಳಿ ಗ್ರಾಮೀಣ ಭಾಗಗಳಿಗೆ ಸರ್ಕಾರದಿಂದ ಬರುವ ಯೋಜನೆಗಳು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನಮಾಡುತ್ತೇನೆ.
ಸನ್ಮಾನ: ಗ್ರಾಮದ ಪರವಾಗಿ ಶಾಸಕರಿಗೆ ಸನ್ಮಾನಿಸಲಾಯಿತು. ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣಾಮಡ್ಡಿ, ಭೀಮಯ್ಯಗೌಡ ಕಟ್ಟಿಮನಿ, ರಾಜುಗೌಡ ಉಕ್ಕಿನಾಳ ರಾಜಶೇಖರ ನಗನೂರ, ಅನಂತರಾವ ದೇಶಪಾಂಡೆ, ನಾಗನಗೌಡ ಅಣಬಿ ಮತ್ತು ಸಮಾರಂಭದಲ್ಲಿ ಮಲ್ಲಿಕಾರ್ಜುನ ಕಂದಕೂರ, ಯಲ್ಲಪ್ಪಕಂದಕೂರ, ಮೈಲಾರಪ್ಪ, ಅಂಬ್ಲಪ್ಪಹರಿಜನ, ಶಂಕ್ರಪ್ಪ, ಶರಣಗೌಡ ಪ್ರೊ. ಪಾಟೀಲ, ಸಿದ್ದನಗೌಡ, ಮೋಹನರಡ್ಡಿ, ಬಸವರಾಜಪ್ಪ ಕಂದಕೂರ, ರವೀಂದ್ರ ಹಳಿಸಗರ, ಮಾರ್ಥಂಡಪ್ಪ ಕಂದಕೂರ, ನಿಂಗಪ್ಪ ಪೂಜಾರಿ, ಬಸವರಾಜ ವಗ್ಗನರ ಸೇರಿದಂತೆ ಹಲವಾರು ಪ್ರಮುಖ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಯಿತು.
ಕ್ಷೀರಭಾಗ್ಯಕ್ಕೆ ಚಾಲನೆ
ಶಹಾಪುರ: ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕಾಗಿ ಅಕ್ಷರದಾಸೋಹದಡಿ ಹಲವಾರು ಯೋಜನೆ ಜಾರಿಗೆ ತಂದಿದ್ದು, ಕ್ಷೀರಭಾಗ್ಯ ಯೋಜನೆಯು ಮುಖ್ಯವಾಗಿದ್ದು, ಶಿಕ್ಷಕರು ಹೆಚ್ಚು ಕಾಳಜಿವಹಿಸಿ ವಿದ್ಯಾರ್ಥಿಗಳಿಗೆ ತಲುಪಿಸಿರಿ ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು. ತಾಲೂಕಿನ ಇಂಗಳಿಗಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
  ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ಕ.ರಾ.ಸ. ನೌಕರರ ಸಂಘದ ಅಧ್ಯಕ್ಷ ಸುಧಾಕರ ಗುಡಿ, ಗುರುಬಸ್ಸಯ್ಯ ಗದ್ದುಗೆ, ಸೋಮಶೇಖರಯ್ಯ ಹಿರೇಮಠ, ರಾಜುಗೌಡ ಉಕ್ಕಿನಾಳ, ರಾಜಶೇಖರ ನಗನೂರ, ಭೀಮಯ್ಯಗೌಡ ಕಟ್ಟಿಮನಿ, ಮಲ್ಲಿಕಾರ್ಜುನ ಕಂದಕೂರ ಯಲ್ಲಪ್ಪ ಕಂದಕೂರ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಮಲ್ಲಪ್ಪ ಕಂದಕೂರ ಮತ್ತು ಉಪಾಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ಮುಖ್ಯಗುರು ಮಹಾದೇವಪ್ಪ. ಸಿ.ಎಸ್, ಸಹ ಶಿಕ್ಷಕರಾದ ಮಲ್ಲಿಕಾರ್ಜುನ. ಆರ್.ಹೆಚ್, ಜ್ಯೋತಿ ಬಸವರಾಜ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement