ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ

Vishwanath S
Updated On : 9 Aug 2013, 11:56 am

ಚಿತ್ತಾಪುರ: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವ ಮನೋಭಾವನೆ ಬೆಳಸಿಕೊಳ್ಳಬೇಕೆಂದು ಜಿಪಂ ಉಪಾಧ್ಯಕ್ಷ ಪಾರ್ವತಿಬಾಯಿ ಶಂಕರ ಚವ್ಹಾಣ ಹೇಳಿದರು.
ತಾಲೂಕಿನ ದಂಡೋತಿಯಲ್ಲಿ ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಶ್ರಾಯದಲ್ಲಿ 2013-14ನೇ ಸಾಲಿನ ತಾಲೂಕು ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಾರೀರಿಕವಾಗಿ ವಿದ್ಯಾರ್ಥಿಗಳ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಪಠ್ಯದೊಂದಿಗೆ ದಿನಾಲು ವಿದ್ಯಾರ್ಥಿಗಳು ಆಟದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಗ್ರಾಪಂ ಅಧ್ಯಕ್ಷ ಸಾಬಣ್ಣ ಕೋಳ್ಳಿ, ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮಣ ಲೋಡ್ಡನೋರೆ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರರಡ್ಡಿ ದೂಗನೂರ, ಪ್ರೌಢಶಾಲೆ ಮುಖ್ಯಗುರು ಲಲಿನಿ, ಶಿಕ್ಷಕ ಅಣಿವೀರಪ್ಪ ನಾಗೂರೆ ಭಾಗವಹಿಸಿ ಮಾತನಾಡಿದರು. ಶಾಲೆ ಮಕ್ಕಳಿಂದ ಪ್ರಾರ್ಥನೆ ಗೀತೆ ಹಾಡಿದರು. ತರಬೇತಿದಾರ ನಾಗರಾಜ ಪ್ರಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement