ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರು (ಅ)ಶುದ್ಧೀಕರಣ ಘಟಕ; ಸಿಡಿಮಿಡಿ

Vishwanath S
Updated On : 9 Aug 2013, 11:56 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಆ.8
ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ನೀರು ಶುದ್ಧೀಕರಣ ಘಟಕಕ್ಕೆ ಗುರುವಾರ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಭೇಟಿ ನೀಡಿ ಪರಿಶೀಲಿಸಿದರು.
  ನಗರದಲ್ಲಿ ಎರಡು ದಿನಗಳಿಂದ ಸಾರ್ವಜನಿಕರಿಗೆ ಸರಬರಾಜಾಗುತ್ತಿರುವ ನೀರು ಕಲುಷಿತವಾಗಿದ್ದು, ಇದರಿಂದ ಜನತೆಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಮೇಲೆ ಶುದ್ಧೀಕರಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿನ ಅವ್ಯವಸ್ಥೆ ಕಂಡು ನಗರಸಭೆ ಅಧಿಕಾರಿಗಳ ಮೇಲೆ ಕಿಡಿಕಾರಿದರು.
ಅವ್ಯವಸ್ಥೆ: ಇಡೀ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಇಲ್ಲಿನ ಫಿಲ್ಟರ್ ಬಿಡ್‌ನಲ್ಲಿ ನೀರನ್ನು ಸರಿಯಾಗಿ ಶುದ್ಧಿಕರಣಗೊಳಿಸುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಅದನ್ನು ಶುಚಿಗೊಳಿಸುವ ಗೋಜಿಗೆ ನಗರಸಭೆ ಸಿಬ್ಬಂದಿ ಹೋಗಿಲ್ಲ ಎಂದು ಜಮಾದಾರ್ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ನೀರು ಶುದ್ಧೀಕರಣದ ತೊಟ್ಟಿಯನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಆದೇಶಿಸಿದರು.
  ಸ್ಥಳದಲ್ಲಿದ್ದ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಚಂದ್ರಶೇಖರ ದಾಸನಕೇರಿ ಮಾತನಾಡಿ, ನಗರದ ನಲ್ಲಿಗಳಲ್ಲಿ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಕಸ ಕಟ್ಟಿಗಳು ಬರುತ್ತಿವೆ. ಇದರಿಂದ ಜನತೆ ಆತಂಕಗೊಂಡಿದ್ದಾರೆ. ನಗರಸಭೆಯ ವತಿಯಿಂದ ಬ್ಲೀಚಿಂಗ್ ಪೌಡರ್‌ಗಾಗಿ ಲಕ್ಷಾಂತರ ಖರ್ಚು ಮಾಡುತ್ತಿದೆ. ಆದರೆ ನೀರು ಶುದ್ಧಮಾಡುವ ಸಂದರ್ಭದಲ್ಲಿ ಅದನ್ನು ಉಪಯೋಗಿಸುತ್ತಿಲ್ಲ ಎಂದು ಆರೋಪಿಸಿದರು.
  ನಂತರ ಡಿಸಿ ಮಾತನಾಡಿ,  ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಭೀಮಾ ನದಿಗೆ ಹರಿ ಬಿಟ್ಟಿರುವದರಿಂದ ಕಲ್ಮಶದಿಂದ ಕೂಡಿದ ನೀರು ನಗರದಲ್ಲಿ ಸರಬರಾಜಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗಿದೆ. ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ಅವರಿಗೆ ನಿರ್ದೇಶನ ನೀಡಲಾಗುವುದು ಎಂದರು.
ದೋಣಿಗೆ ಡಿಸಿ ಜಮಾದಾರ ಚಾಲನೆ
ಯಾದಗಿರಿ: ಜಿಲ್ಲೆಯ ಭೀಮಾ ನದಿಯ ತೀರದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರು ಪೂಜೆ ಸಲ್ಲಿಸಿ ದೋಣಿಗೆ ಚಾಲನೆ ನೀಡಿದರು. ಜಿಲ್ಲೆಯಲ್ಲಿ ಯಾವುದೇ ಪ್ರವಾಹ ಬಂದಾಗ ಮುನ್ಸೂಚನೆ ನೀಡಲು ಜನರನ್ನು ರಕ್ಷಿಸಲು  ಯಂತ್ರ ಚಾಲಿತ ಎರಡು ದೋಣಿಗಳನ್ನು 12 ಲಕ್ಷ ವೆಚ್ಚದಲ್ಲಿ  ಖರೀದಿಸಲಾಗಿದೆ. ಈಗಾಗಲೇ ಒಂದು ದೋಣಿ ಎಸ್.ಪಿ. ಕಾರ್ಯಾಲಯದಲ್ಲಿ ಇದೆ. ಜಿಲ್ಲೆಯಲ್ಲಿ ಪ್ರವಾಹ ಬಂದರೆ ನಾವು ಜನರನ್ನು ರಕ್ಷಿಸಲು ಎರಡು ದೋಣಿಗಳನ್ನು ಜಿಲ್ಲೆಗೆ ತಂದಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರವಾಹ ಪೀಡಿತ ಜನರಿಗೆ ಯಾವುದೇ ತೊಂದರೆ ಉಂಟಾದರೆ ಜಿಲ್ಲಾಡಳಿತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ. ಈಗಾಗಲೇ 5 ಸಿಬ್ಬಂದಿ ನೇಮಕ ಮಾಡಲಾಗಿದೆ.  ಅವರಿಗೆ ತರಬೇತಿ ಸಹ ನೀಡಲಾಗಿದೆ ಎಂದರು.
'ಅನ್ನಭಾಗ್ಯ' ಸಮರ್ಪಕ ಜಾರಿಗೆ ಕನ್ನಡ ಸೇನೆ ಆಗ್ರಹ
ಯಾದಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿಗೆ ತರುವಂತೆ ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ ಈ ಯೋಜನೆಯಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಬಹಳ ಉಪಯುಕ್ತವಾಗಿದೆ. ಆದರೆ ನ್ಯಾಯಬೆಲೆ ಅಂಗಡಿ ಮಾಲಿಕರ ವ್ಯಾಪಾರಿ ಮನೋಭಾವದಿಂದ ಬಡವರು ಶೋಷಣೆಗೋಳಗಾಗುತ್ತಿದ್ದಾರೆಂದು ಆರೋಪಿಸಿದರು.
ಗ್ರಾಹಕರಿಗೆ ಸರ್ಕಾರ ನಿಗದಿಗೊಳಿಸಿದಷ್ಟು ಅಕ್ಕಿ, ಸಕ್ಕರೆ, ಗೋಧಿ ನೀಡದಿರುವುದು. ಕೆಲವು ಕಡೆ ನಿಗದಿತ ಅಕ್ಕಿ ನೀಡದೆ, ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯಾಪಾರಿ ಮನೋಭಾವದಿಂದ ಮಾರ್ಕೆಟ್‌ಲ್ಲಿರುವ ಕಳಪೆ ಗುಣ ಮಟ್ಟದ ಕಡಿಮೆ ಬೆಲೆಯ ವಸ್ತುಗಳಾದ ಸಾಬೂನು, ಎಣ್ಣೆ, ಇನ್ನೀತರ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಬಲವಂತವಾಗಿ ನೀಡಲಾಗುತ್ತಿದೆ. ಅಂತಹ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದುಗೋಳಿಸಬೇಕೆಂದು ಒತ್ತಾಯಿಸಿದರು. ದೇವುಬಿಗುಡಿ, ರಾಜು ಕಲಾಲ, ಮಲ್ಲಿಕಾರ್ಜುನರಡ್ಡಿ, ಆಲ್ಲೂರ, ಮರೆಪ್ಪ ಹವಲ್ದಾರ, ವಿಜಯ ಬೆಗೆರಿ, ಸಿದ್ದು, ತಿರುಪತಿ, ದಶರಥ, ಹಣಮಯ್ಯ, ಶಿವು, ನಾಗರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement