ಬಡ ಮುಸ್ಲಿಮರಿಗೆ ಆಹಾರ ಸಾಮಗ್ರಿ ವಿತರಣೆ
ಚಿತ್ತಾಪುರ: ಇಲ್ಲಿಯ ಸೇಲ್ಪಿ ಬೈತೂಲ್ ಮಾಲ್ ಸಮಿತಿ ವತಿಯಿಂದ ಬಡ ಮುಸ್ಲಿಂ ಕುಟುಂಬದವರಿಗೆ ರಂಜಾನ್ ಹಬ್ಬದ ಅಡುಗೆ ಸಾಮಗ್ರಿಗಳನ್ನು ಐಲೇಹದಿಸ್ ಮಜಿದ್ನಲ್ಲಿ ಗುರುವಾರ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಎಂ.ಡಿ. ಹುಸೇನಸಾಬ್ ಮಾತನಾಡಿ, ಪ್ರತಿ ಮೂರು ವರ್ಷದಿಂದ ಮುಸ್ಲಿಂ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ತುಪ್ಪ, ಶುರುಕುಂಭ ಸಾಮಗ್ರಿಗಳು ಹಾಗೂ ಸಾಬೂನ ಶೇಂಗಾ, ಹಾಲು ಇನ್ನಿತರ ಸಾಮಗ್ರಿಗಳನ್ನು 150 ಕುಟುಂಬಗಳಿಗೆ ವಿತರಿಸಲಾಯಿತು ಎಂದು ತಿಳಿಸಿದರು. ಮುಖಂಡರಾದ ಎಂ.ಎ. ನಯಿಮ್, ಎಂ.ಡಿ. ಸಖೀಲ್, ಮೌಲನಾಇಸ್ಮಾಯಿಲ್ ಪೈಜಿ, ಡಾ. ಅಬ್ದಲ್ ಕರಿಂ, ಬಾಬಾಶೇಠ, ಅಬ್ದಲ್ ರಸೂಲ್ ಮುಸ್ತಾಪ್, ಎಂ.ಎ. ರಶೀದ್, ಅಬ್ದಲ್ ಕಲಿಂ, ಅಬ್ದಲ್ ಮಲಿಕ್, ನಜೀರ್ ಆಡಕಿ, ಸಲಿಂ ಪಟೇಲ್ ಮಾಜಿದ್ ಇತರರು ಉಪಸ್ಥಿತರಿದ್ದರು.