ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿರಾ ಆವಾಸ್: 1,042 ಮನೆ ಮಂಜೂರು

Vishwanath S
Updated On : 10 Aug 2013, 12:14 pm

ಹುಣಸಗಿ: ಕೇಂದ್ರ ಸರ್ಕಾರ ಇಂದಿರಾ ಆವಾಸ ಆಸರೆ ಮನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುವಂತೆ ಸುತ್ತೋಲೆ ಹೊರಡಿಸಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಸಂಸ್ಥೆಯಿಂದ, ಸುರಪುರ ತಾಲೂಕಿನ 42 ಗ್ರಾಮ ಪಂಚಾಯತಿಗಳಿಗೆ 1,042 ಮನೆಗಳನ್ನು ಮಂಜೂರು ಮಾಡಲಾಗಿದೆ. ಅದರಂತೆ ಸೂತ್ತೊಲೆ ಬಂದಿದೆ ಎಂದು ಹುಣಸಗಿ ತಾಲೂಕು ಪಂಚಾಯತಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಪತ್ರಿಕೆಗೆ ತಿಳಿಸಿದ್ದಾರೆ.
  ಕೇಂದ್ರ ಸರ್ಕಾರದಿಂದ ಇಂದಿರಾ ಆವಾಸ್ ಯೋಜನೆಯಲ್ಲಿ ಪ್ರತಿವರ್ಷ ಜಿಲ್ಲಾವಾರು ಗುರಿಯನ್ನು ನಿಗದಿ ಪಡಿಸಲಾಗುತ್ತಿತ್ತು. ಆದರೆ ಕೇಂದ್ರ 2013-14 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 41,820 ಪರಿಶಿಷ್ಟ ಪಂಗಡಕ್ಕೆ 26,153 ಅಲ್ಪ ಸಂಖ್ಯಾತರಿಗೆ 14,024 ಮತ್ತು ಸಾಮಾನ್ಯರಿಗೆ 5,819 ಹೀಗೆ ಒಟ್ಟು 87,816 ಮನೆಗಳನ್ನು ವಿತರಿಸಲು ಸೂತ್ತೋಲೆ ಹೊರಡಿಸಿದೆ.
ಅಧಿಕಾರಿಗಳಿಗೆ ಪತ್ರ: 2001ರ ಜನಸಂಖ್ಯೆ ಆಧಾರದ ಮೇಲೆ ಮನೆಗಳ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪತ್ರ ಬರೆದಿದೆ. ಈ ಯೋಜನೆ ನೀಡಲಾಗುವ ಮನೆಗಳಿಗೆ ಒಂದೂವರೆ ಲಕ್ಷ ರುಪಾಯಿಗಳ ವೆಚ್ಚ ಹೊಂದಿದೆ. ಇದರಲ್ಲಿ 52,500 ಕೇಂದ್ರ ಸರ್ಕಾರ ನೀಡಲಿದೆ. 67,500, ರಾಜ್ಯ ಸರ್ಕಾರ ಹಾಗೂ ಬ್ಯಾಂಕ್ ಸಾಲ 20 ಸಾವಿರ ವೈಯಕ್ತಿಕ ವಂತಿಗೆ 10 ಸಾವಿರ ಸೇರಿದಂತೆ ಒಟ್ಟು 1.50 ಲಕ್ಷ ಈ ಘಟಕಕ್ಕೆ ತಗಲುವುದೆಂದು ತಿಳಿಸಲಾಗಿದೆ. ಮಹಿಳಾ ಫಲಾನುಭವಿಗಳು ಕಡ್ಡಾಯವಾಗಿರಬೇಕು. ಅಂಗವಿಕಲರು, ಮಾಜಿ ಸೈನಿಕರು, ವಿಧುರರು, ಹಿರಿಯ ನಾಗರೀಕರಿಗೆ ಈ ನಿಯಮಾವಳಿಯಿಂದ ವಿನಾಯತಿ ನೀಡಲಾಗಿದೆ.
ವಿವಿಧ ವರ್ಗಗಳಿಗೆ: ಸುರಪುರ ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ತಾಲೂಕಿನಲ್ಲಿ 56,928 ಇದೆ. ಅದರಲ್ಲಿ 381 ಮನೆಗಳನ್ನು ಎಸ್ಸಿಗೆ ನಿಗದಿ ಪಡಿಸಿದ್ದು, ಎಸ್ಟಿ 53,738 ಜನಸಂಖ್ಯೆಗೆ  484 ಮನೆಗಳನ್ನು ನಿಗದಿಪಡಿಸಲಾಗಿದೆ. ಅಲ್ಪಸಂಖ್ಯಾತರು 33,364 ಇದ್ದು 137 ಮನೆಗಳನ್ನು ಹಾಗೂ ಸಾಮಾನ್ಯರು 2,93,133 ಇದ್ದು 40 ಮನೆಗಳು. ಹೀಗೆ ಒಟ್ಟು 1,042 ಮನೆಗಳನ್ನು ಪ್ರಸಕ್ತ ಸಾಲಿಗೆ ನಿಗದಿ ಪಡಿಸಲಾಗಿದೆ.
  ಹಿಂದುಳಿದ ವರ್ಗಗಳ ಜನರಿಗೆ ಈ ಕೋಟಾದಲ್ಲಿ ಯಾವುದೇ ಮನೆಗಳನ್ನು ಹಂಚಿಕೆ ಸೂಕ್ತ ಮಾರ್ಗದರ್ಶನ ಇಲ್ಲದ್ದಕ್ಕೆ ಬಡತನ ರೇಖೆಗಿಂತ ಕೆಳಗಿರುವ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಹೊರತು ಪಡಿಸಿ ಬರುವ ಮನೆಗಳಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಆಸರೆ ಮನೆಗಳು ಲಭ್ಯವಾಗುವವು. ಇದಕ್ಕಾಗಿ ಆತಂಕ ಪಡುವ ಅಗತ್ಯ ಇಲ್ಲ ಎಂದು ತಾಪಂ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement