ಕುಸಿತದ ಭೀತಿಯಲ್ಲಿ ಪಶು ಚಿಕಿತ್ಸಾಲಯ
ಕೆಂಭಾವಿ: ಸಮೀಪದ ಯಾಳಗಿ ಗ್ರಾಮದ ಗ್ರಾಮೀಣ ಪಶು ಚಿಕಿತ್ಸಾಲಯ ಕಟ್ಟಡ ಯಾವಾಗ ಕುಸಿತವಾಗುತ್ತದೆಯೋ ಎಂಬ ಭೀತಿಯಲ್ಲಿ ಗ್ರಾಮದ ಜನತೆ ಇದ್ದಾರೆ.
ಈ ಗ್ರಾಮದಲ್ಲಿ ಸುಮಾರು 40 ವರ್ಷಗಳ ಹಿಂದೆಯೇ ಗ್ರಾಮೀಣ ಪಶುಚಿಕಿತ್ಸಾಲಯ ಮಂಜೂರಿಯಾಗಿದೆ. ಈ ಗ್ರಾಮದಲ್ಲಿ ದಾಖಲೆಯಲ್ಲಿ 3 ಬಾರಿ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಟಿಡಿಬಿ, ಜಿಲ್ಲಾ ಪರಿಷತ್, ಪಶುಪಾಲನಾ ಇಲಾಖೆಗಳ ವತಿಯಿಂದ ಸಾಕಷ್ಟು ವೆಚ್ಚ ಮಾಡಿ ಕಟ್ಟಡ ನಿರ್ಮಿಸಿದ್ದರು ಕಟ್ಟಡದ ದುಸ್ಥಿತಿ ಮಾತ್ರ ತಪ್ಪಿಲ್ಲ, ಇಂತಹ ಅವನತಿಯ ಅಂಚಿನಲ್ಲಿರುವ ಕಟ್ಟಡದಲ್ಲಿಯೇ ಪಶು ಚಿಕಿತ್ಸಾಲಯ ನಡೆಯುತ್ತಿದೆ.
ಯಾವ ಹೊತ್ತಿಗೆ ಯಾರನ್ನು ಬಲಿ ತೆಗದುಕೊಳ್ಳುತ್ತದೆಯೋ ತಿಳಿದಿಲ್ಲಾ ಎನ್ನುತ್ತಾರೆ ಗ್ರಾಮದ ಪ್ರಗತಿ ಪರ ರೈತರು. ಈಗಲಾದರೂ ಇಲಾಖೆಯ ಅಧಿಕಾರಿ ಈ ಕಟ್ಟಡದಲ್ಲಿ ಸೇವೆ ಮಾಡುವ ಅಧಿಕಾರಿಗಳ ಬಲಿ ತೆಗೆದುಕೊಳ್ಳುವ ಮೊದಲು ಈ ಕಟ್ಟಡ ನಿರ್ಮಿಸಲಿ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.