ಬ್ರಾಹ್ಮಣ ನೌಕರರ ಸಭೆ ಯಶಸ್ವಿ
ಗುಲ್ಬರ್ಗ: ನಗರದ ವೈಭವ ಕಲ್ಯಾಣ ಮಂಪಟದಲ್ಲಿ ಈಚೇಗೆ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸಭೆ ನಡೆಯಿತು. ಶ್ರೀನಿವಾಸ ಭಟ್ಟರ್ಕಿ, ಪ್ರಹ್ಲಾದ್ ಜೋಶಿ, ಸತೀಶ ಜಾನಿಬ್, ಬಾಬುರಾವ ಕುಲಕರ್ಣಿ, ಸುರೇಶ ಕುಲಕರ್ಣಿ, ಸುನೀಲ್ ಕುಲಕರ್ಣಿ, ರಂಗನಾಥ, ಆನಂದತೀರ್ಥ, ವಿನಾಯಕ ಕುಲಕರ್ಣಿ, ಸುಧೀರ ಕುಲಕರ್ಣಿ, ನಾಗರಾಜ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ರವೀಂದ್ರ ದೇಸಾಯಿ ಇತರ ಇಲಾಖೆಯ ಬ್ರಾಹ್ಮಣ ನೌಕರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದಿಂದ ಚುನಾಯಿತರಾದ ಗುರುರಾಜ ಕುಲಕರ್ಣಿ, ಶ್ರೀನಿವಾಸ ಪಾಟೀಲ್, ಕೃಷ್ಣಾಚಾರ್ಯ ಜೋಶಿ, ವಸಂತ ಜೋಶಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಂಸ್ಕೃತ ವಿಷಯ ಪರವೀಕ್ಷಕರಾಗಿ ಬಡ್ತಿ ಹೊಂದಿದ ವಿಠ್ಠಲ್ ದತ್ತಾತ್ರೇಯರಾವ ಕುಲಕರ್ಣಿಗೆ ಸನ್ಮಾನಿಸಲಾಯಿತು.
ರೇಲ್ವೆ ಟಿಕೆಟ್ ಹೊಸ ಕೌಂಟರ್ ಆರಂಭ
ಗುಲ್ಬರ್ಗ: ಗುಲ್ಬರ್ಗ ನಗರದ ರೈಲು ನಿಲ್ದಾಣದ ತಾರಫೈಲ್ ಬಡಾವಣೆಯಿಂದ ಪ್ರವೇಶ ಮಾಡುವ ಕಡೆಗೂ ಹೊಸದಾಗಿ ಸಾಮಾನ್ಯ ರೇಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಶುಕ್ರವಾರದಂದು ಕಾರ್ಯಾರಂಭಗೊಂಡಿದೆ. ಇದರಿಂದ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ನಿಲ್ದಾಣದ ಪ್ಲಾಟ್ ಫಾರಂ 3 ಬಳಿಯಿರುವ ರೇಲ್ವೆ ಪ್ರಯಾಣಿಕರ ಪಾದಚಾರಿ ಸೇತುವೆಯ ಬಳಿ ಕೌಂಟರ್ ಆರಂಭಗೊಂಡಿದೆ. ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಸೋಲಾಪುರ ರೇಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಜೇವರ್ಗಿ ಹಳೆಯ ರಸ್ತೆ ಕಡೆಯಿಂದ ಬರುವ ಪ್ರಯಾಣಿಕರಿಗೆ ಅನುವು ಆಗಲಿದೆ. ಇದನ್ನು ಎಲ್ಲ ಪ್ರಯಾಣಿಕರು ಗಮನಿಸುವಂತೆ ಕೋರಲಾಗಿದೆ. ಶುಕ್ರವಾರದಿಂದ ಇಲ್ಲಿ ಜನರಲ್ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದಿನ ದಿನಗಳಲ್ಲಿ ಹೊಸ ಪ್ಲಾಟ್ ಫಾರಂ ನಿರ್ಮಾಣ ಪೂರ್ಣಗೊಂಡ ನಂತರ ಇನ್ನಷ್ಟು ಕೌಂಟರ್‌ಗಳನ್ನು ಹೆಚ್ಚಿಸುವುದರ ಜತೆಗೆ ರಿಜರ್‌ವೇಷನ್ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಪ್ಲೋಮಾ
ಪ್ರವೇಶಕ್ಕೆ ಅರ್ಜಿ
ರಾಯಚೂರು: ಪ್ರಸಕ್ತ ಸಾಲಿನ ಡಿಪ್ಲೋಮಾ ಪ್ರಥಮ ವರ್ಷದ ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಕರೆಯಲಾಗಿದೆ. ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯು ಖಾಲಿಯಿರುವ ಸ್ಥಾನಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು, ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ ಢಿಢಿಢಿ.ಜಡ್ಛಿ.್ಞಛ್ಠ.್ಝಟಿ, ಢಿಢಿಢಿ.ಜಡಿಜ್ಞಛ್ಠಟಿಛಡಿಛ್ಞಛ.್ಝಟಿ ರಿಂದ ಅರ್ಜಿ ಪಡೆಯಬಹುದು. ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಆ.13 ಕಡೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ರಾಯಚೂರು ಇವರನ್ನು ಸಂಪರ್ಕಿಸಲು ಕೋರಲಾಗಿದೆ.