'ಸಾಕ್ಷರತೆ ಹೆಚ್ಚಳಕ್ಕೆ ತರಬೇತಿ ಅವಶ್ಯ'
ಆಳಂದ: ದೇಶದಲ್ಲಿ ಭೂತವಾಗಿ ಕಾಡುತ್ತಿರುವ ಅನಕ್ಷರತೆಯನ್ನು ಬೇರು ಸಮೇತವಾಗಿ ಕಿತ್ತೊಗೆಯಲು ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ಸಾಧ್ಯ ಎಂದು ತಾಪಂ.ನ ಬಸವರಾಜ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಲೋಕ ಶಿಕ್ಷಣ ಸಾಕ್ಷರತಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅವರು, ತಾಲೂಕಿನ 39 ಗ್ರಾಪಂಗಳಲ್ಲಿ ಮೊದಲ ಹಂತದ ಕಾರ್ಯಕ್ರಮ ಮುಕ್ತಾಯವಾಗಿದ್ದು, ಎರಡನೇ ಹಂತದ ಕಾರ್ಯಕ್ರಮದ ಯಶಸ್ವಿಗೆ ಪ್ರೇರಕರು, ಸ್ವಯಂ ಸೇವಕರು ಪ್ರಯತ್ನಿಸಬೇಕು ಎಂದರು.
ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಯೋಜನಾಧಿಕಾರಿ ರಮೇಶಬಾಬು ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಸಂತೋಷ ವೇದಪಾಠಕ, ಧರ್ಮರಾಜ ಕೊರಳ್ಳಿ, ಗಣಪತಿ ಪ್ರಚಂಡೆ, ತಾಲೂಕು ಸಂಯೋಜಕ ಶ್ರೀಶೈಲ್ ಕಂಬಾರ, ಚಂದ್ರಕಾಂತ ನರೋಣಿ, ಅಂಬಾದಾಸ ಗಾಯಕವಾಡ, ಗುಂಡಪ್ಪ ರಾಮನ್, ಗುರಣ್ಣ ಗೌರಸೆ ಪಾಲ್ಗೊಂಡಿದರು. ಸ್ವಯಂ ಸೇವಕರು, ತರಬೇತಿ ಪಡೆದ ಶಿಕ್ಷಕರು ಪಾಲ್ಗೊಂಡಿದರು.