ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಟಿಸಿ
ಚಿತ್ತಾಪುರ: ಇಲ್ಲಿಯ ಜನತಾ ಚೌಕ್‌ನಲ್ಲಿ ಹನುಮಾನ ಮಂದಿರದ ಎದುರುಗಡೆ ಇರುವ ವಿದ್ಯುತ್ ಪರಿವರ್ತಕ (ಟಿಸಿ) ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಾಗರಿಕರಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಟಿಸಿ ಪ್ರಮುಖ ರಸ್ತೆಯಲ್ಲಿರುವುದರಿಂದ ವಾಹನ ಸಂಚಾರ ಹಾಗೂ ಜನದಟ್ಟಣೆಯಿಂದ ಕೂಡಿರುತ್ತದೆ. ಈ ಟಿಸಿ ಕೆಳಗಡೆ ಹಳ್ಳಿಗಳಿಂದ ಬಂದು ಮಹಿಳೆಯರು ಹಣ್ಣು ತರಕಾರಿ ಮಾರಾಟ ಮಾಡುತ್ತಾರೆ. ಪ್ರಮುಖ ರಸ್ತೆಯಾಗಿರುವುದರಿಂದ ದ್ವಿಚಕ್ರ ವಾಹನಗಳು ಹಾಗೂ ಬಜಾರ್‌ಗೆ ಬರುವ ವಾಹನಗಳು ಈ ರಸ್ತೆಯಲ್ಲಿ ಹಾಗೂ ದನಕರುಗಳು ತಿರುಗಾಡುತ್ತವೆ. ಇದರ ಪಕ್ಕದಲ್ಲಿ ಪುರುಷ ಹಾಗೂ ಮಹಿಳೆಯರ ಮೂತ್ರಾಲಯ ಇರುವುದರಿಂದ ಜನರು ಹಾಗೂ ವ್ಯಾಪಾರಸ್ಥರು, ಸಾರ್ವಜನಿಕರು ಭಯದಲ್ಲಿ ತಿರುಗಾಡುತ್ತಿದ್ದಾರೆ. ವಾಹನಗಳು ಸ್ವಲ್ಪ ಕಂಬಕ್ಕೆ ತಾಗಿದರೂ, ಭಾರಿ ಅನಾಹುತವಾಗುವ ಸಂಭವವಿದೆ. ಅನಾಹುತಕ್ಕೆ ಮುಂಚೆ ಪುರಸಭೆಯವರು ಹಾಗೂ ಜೆಸ್ಕಾಂ ಇಲಾಖೆಯವರು ಎಚ್ಚೆತ್ತು ಈ ವಿದ್ಯುತ್ ಪರಿವರ್ತಕ ಬೇರೆಡಗೆ ಸ್ಥಳಾಂತರಿಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.