ಅರಣ್ಯ ಸಂಪತ್ತಿನ ನಾಶದಿಂದ ಮುಂದಿನ ಪೀಳಿಗೆಗೆ ಕಷ್ಟ: ಪವಾರ್
ಕನ್ನಡಪ್ರಭ ವಾರ್ತೆ , ಚಿತ್ತಾಪುರ , ಆ.10
ಇಂದಿನ ಜಾಗತೀಕರಣದಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಅರಣ್ಯ ಸಂಪತ್ತು ನಾಶವಾಗುತ್ತ ಹೋದರೆ ಮುಂದಿನ ಪೀಳಿಗೆಗೆ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆಯ ಎಚ್.ಆರ್. ವಿಭಾಗದ ಹಿರಿಯ ಅಧಿಕಾರಿಗಳಾದ ಜೆ.ಜೆ. ಪವಾರ್ ವಿಷಾದ ವ್ಯಕ್ತಪಡಿಸಿದರು.
ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಜಗಜ್ಯೋತಿ ಬಸವ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ಸುಮಾರು 2 ಸಾವಿರ ಉಚಿತ ಸಸಿ ವಿತರಿಸಿ ಮಾತನಾಡಿ, ವಾಡಿ ಸಿಮೆಂಟ್ ಕಾರ್ಖಾನೆ ವತಿಯಿಂದ ಪರಿಸರ ಸಂರಕ್ಷಣೆ ಸಹಕಾರ ಹಾಗೂ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಸಂರಕ್ಷಿಸಿ: ನೀಲಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಎಸ್.ಎಂ.ಐ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿಯೊಂದು ಗಿಡಕ್ಕೂ ತಮ್ಮ ತಂದೆ ತಾಯಿ ಮತ್ತು ಆದರ್ಶ ವ್ಯಕ್ತಿಗಳ ಹೆಸರನ್ನಿಟ್ಟು ಸಂರಕ್ಷಿಸಿ ಬೆಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅತಿಥಿಗಳಾಗಿ ಎಸಿಸಿ ಕಂಪನಿ ಅಧಿಕಾರಿಗಳಾದ ವಾಲ್ಮೀಕಿ ಕಾಂಬಳೆ, ಚಾಂದ್ ಅಕ್ತರ್, ರಾವೂರ ಜಿಪಂ ಸದಸ್ಯರಾದ ಇಬ್ರಾಹಿಂ ಪಟೇಲ್, ಗ್ರಾಮದ ಹಿರಿಯ ಮುಖಂಡರಾದ ಅಂಬಣ್ಣ ಗೌಡ, ಶಂಕರಗೌಡ ಪಾಟೀಲ್, ಕೀಷನ ರಾವ್ ಕುಲಕರ್ಣಿ, ವೀರಣ್ಣ ಯಾರಿ, ಪ್ರಭು ಪಸಾರ, ಶಾಂತಯ್ಯ ಹಿರೇಮಠ, ಬಸವರಾಜ ಸುಲೇಪೇಟ್, ಶಿಕ್ಷಕಿಯರಾದ ಸುಮಂಗಲಾ ವಾಡಿ, ಶಾಂತಾ, ಸವಿತಾ ಮಾಟನಳ್ಳಿ, ಜಯಲಕ್ಷ್ಮೀ, ಸುಲೋಚನಾ, ಜಯಶ್ರೀ ಹಿರೇಮಠ, ಸಿದ್ದು ಹಡಪದ ಇದ್ದರು. ಕಾರ್ಯದರ್ಶಿ ಭೀಮಾಶಂಕರ ಇಂದೂರ ನಿರೂಪಿಸಿದರು.