ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕುರಿದೊಡ್ಡಿಯಾದ ಶಾಲಾ ಕಟ್ಟಡ

Vishwanath S
Updated On : 11 Aug 2013, 12:19 pm

ಕೆಂಭಾವಿ: ಸರ್ಕಾರ ಪ್ರತಿ ಗ್ರಾಮಕ್ಕೂ ಒಂದು ಶಾಲೆ ಇರಲಿ. ಶಾಲೆಗೊಂದು ಕಟ್ಟಡವಿರಲಿ ಎಂಬ ಸರ್ವ ಶಿಕ್ಷಾ ಅಭಿಯಾನ ಯೋಜನೆ ಅಡಿಯಲ್ಲಿ ಕಟ್ಟಡರಹಿತ ಶಾಲೆಗಳಿಗೆ ಕಟ್ಟಡವನ್ನು ನಿರ್ಮಿಸಲು ಹೊರಟಿದೆ. ಆದರೆ ಆ ಕಟ್ಟಡದಲ್ಲಿ ಶಾಲೆ ನಡೆಯುತ್ತದೋ, ಇಲ್ಲವೋ ಎಂದು ಇಲಾಖೆಯ ಗಮನಕ್ಕೆ ಬರದ ಘಟನೆ ಸಮೀಪದ ನಗನೂರು ಗ್ರಾಮದಲ್ಲಿ ನಡೆದಿದೆ.
ಕೆಂಭಾವಿಯಿಂದ ನಗನೂರು ಪ್ರವೇಶ ಮಾಡುವಾಗ ಕಾಣುವ ಸುಸಜ್ಜಿತವಾಗಿ ರು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಈಗ ಕುರಿದೊಡ್ಡಿಯಾಗಿ ಮಾರ್ಪಟ್ಟಿದೆ. ಇದರ ಬಗ್ಗೆ ಯಾಮೊಬ್ಬ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗಮನವೇ ಹರಿಸುತ್ತಿಲ್ಲ.  ಇದೇ ಗ್ರಾಮದಲ್ಲಿರುವ ನಗನೂರು ಕಿರದಳ್ಳಿ ರಸ್ತೆಯಲ್ಲಿ ಬರುವ ಕಿರದಳ್ಳಿ ರಸ್ತೆ ಶಾಲೆಯಲ್ಲಿಯ ಮಕ್ಕಳು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಮಕ್ಕಳಾಗಿದ್ದಾರೆ. ಇಲ್ಲಿ ಕೇವಲ ದಾಖಲಾತಿಯಲ್ಲಿ 25 ಮಕ್ಕಳಿದ್ದು, ಇದರಲ್ಲಿ ಅರ್ಧ ಮಕ್ಕಳು ನಗನೂರು ಶಾಲೆಯ ದಾಖಲಾತಿಯಲ್ಲೂ ಇದ್ದಾರೆ ಎಂದು ಅಧಿಕಾರಿಗಳೇ ಹೇಳುತ್ತಾರೆ.
ಸಿಕ್ಕದ ಶಿಕ್ಷಣ ಭಾಗ್ಯ: ಇಂತಹ ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಬಡಾವಣೆಯವರು 1 ಎಕರೆ ಜಮೀನನ್ನು ಕೊಟ್ಟು 5 ವರ್ಷವೇ ಗತಿಸಿದೆ. ಜಮೀನು ದಾನವಾಗಿ ಕೊಟ್ಟ ವ್ಯಕ್ತಿ ಮೃತಪಟ್ಟು ಹೋದರು. ಸರ್ಕಾರದಿಂದ ರು. 6 ಲಕ್ಷ ಹಣ ಬಿಡುಗಡೆಯಾದರೂ, ಈ ಮಕ್ಕಳಿಗೆ ಕಟ್ಟಡದಲ್ಲಿ ಕುಳಿತುಕೊಳ್ಳುವ ಭಾಗ್ಯ ಮಾತ್ರ ಇನ್ನು ಕೂಡಿ ಬಂದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕುರಿಗಳಿಗೆ ಹಾಕಲು ನಿರ್ಮಿಸುವ ಮುರುಕಲು ಗುಡಿಸಲಲ್ಲೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆಸಲಾಗುತ್ತಿದೆ. ಅಲ್ಲಿಗೆ ಕಿರದಳ್ಳಿ ಗ್ರಾಮದಿಂದ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಕೆಂಪರಂಗಯ್ಯ ಹೇಳಿದರು.

-ಹಳ್ಳೇರಾವ್ ಎಸ್ ಕುಲಕರ್ಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement