ಪಪಂ ಆವರಣದಲ್ಲಿ ಭ್ರೂಣ ಪತ್ತೆ
ಅಫಜಲ್ಪುರ: ಇಲ್ಲಿನ ಪಟ್ಟಣ ಪಂಚಾಯತಿ ಆವರಣದಲ್ಲಿ ಇರಿಸಲಾಗಿರುವ ಕಸ ವಿಲೇವಾರಿ ಡಬ್ಬಿಯ ಹತ್ತಿರ ಭ್ರೂಣವೊಂದನ್ನು ಎಸೆದು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಷಯ ತಿಳಿಯುತ್ತಿದಂತೆ ಸಾರ್ವಜನಿಕರು ಬಂದು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಅಂದಾಜು 4 ತಿಂಗಳು ಇರಬಹುದೇನೋ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂದಿತ್ತು.
ಬೇಡವಾಗಿರುವ ಭ್ರೂಣವನ್ನು ಯಾವ ಮಹಾತಾಯಿ ಹತ್ಯೆ ಮಾಡಿದಳೋ ಎಂದು ಹಲವು ತಾಯಂದಿರು ಹಿಡಿಶಾಪ ಹಾಕುತ್ತಾ ಶೋಕ ವ್ಯಕ್ತಪಡಿಸಿ ಹೋಗುವ ದೃಶ್ಯ ಕನಿಕರ ಹುಟ್ಟಿಸುವಂತಿತ್ತು.
ಪಟ್ಟಣ ಪಂಚಾಯತ್ ಸಿಬ್ಬಂದಿ ಭ್ರೂಣವನ್ನು ತೆಗೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿದರು.