ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಹಾಪುರ ಹೊಸ ಬಸ್‌ನಿಲ್ದಾಣ ನಿರ್ಲಕ್ಷ್ಯದ ತಾಣ

Vishwanath S
Updated On : 11 Aug 2013, 12:19 pm

ಶಹಾಪುರ: ಕಳೆದ ಒಂದು ವಾರದಿಂದ ನೀರಿನ ಸೌಕರ್ಯವಿಲ್ಲ, ಗುಟ್ಕಾ ಬಂದಾದರು ಎಲ್ಲೆಂದರಲ್ಲೆ ಉಗುಳಿ ಅಸಹ್ಯದ ಸ್ಥಿತಿ, ಮಲಮೂತ್ರ ಡ್ರೈನೇಜ್‌ಗೆ ಹೋಗದೆ ಪಕ್ಕದಲ್ಲೆ ಹರಿದು ಇಡೀ ಬಸ್‌ನಿಲ್ದಾಣ ನಾರುತ್ತಿದೆ. ಮಹಾತ್ಮರ ಭಾವಚಿತ್ರಗಳು ಅದರ ಸುತ್ತಲೂ ಜೀಡಿ ತುಂಬಿದ್ದು, ಜನರಿಲ್ಲದಿದ್ದರೂ ಕಸಕಡ್ಡಿಗೇನು ಕಡಿಮೆಯಿಲ್ಲ. ಇನ್ನು ಯಾವುದೇ ಬಸ್ ಬಂದರೂ ಸೌಕರ್ಯವಿಲ್ಲದ ಸ್ಥಿತಿ ನೋಡಿ ಅಡ್ಡಾದಿಡ್ಡಿ ನಿಂತು, ಹಳೇ ಬಸ್‌ನಿಲ್ದಾಣಕ್ಕೆ ಹೋಗುತ್ತಿವೆ. ವೇಳಾಪಟ್ಟಿ ಧ್ವನಿ ವರ್ಧಕ ಮೂಲಕ ಹೇಳುತ್ತಿದ್ದರೂ ಬಸ್ಸು ಬರುವುದಕ್ಕೂ ಹೇಳುವುದಕ್ಕೂ ಸಂಬಂಧವೇ ಇಲ್ಲ.
ಹೆದರುವಂಥ ಸ್ಥಿತಿ: ಕಾಟಾಚಾರಕ್ಕೆ ಕಂಟ್ರೋಲ್ ಬಳಿ ಬಸ್‌ಗಳ ನೋಂದಣಿಯಾಗುತ್ತಿದ್ದರೂ ಇದೊಂದು ಸಿಟಿ ಬಸ್‌ಸ್ಟಾಪ್ ನಿಂತಾಗಿದ್ದು, ರಾತ್ರಿ 7 ಗಂಟೆಯಾದರೆ ಸೆಕ್ಯುರಿಟಿ ಗಾರ್ಡ್ ಇಲ್ಲದೆ ಬಸ್ ನಿಲ್ದಾಣದೊಳಗೆ ಬರಲು ಹೆದರುವಂಥ ಸ್ಥಿತಿಯಾಗಿದ್ದು, ಅಸುರಕ್ಷತೆಯ ಮಧ್ಯ ಕೆಲವೇ ದಿನಗಳಲ್ಲಿ ಪಡ್ಡೆ ಹುಡುಗರ ತಾಣವಾದರು ಅಚ್ಚರಿ ಪಡುವಂತಿಲ್ಲ. ಇದು ಶಹಾಪುರ ಬಸ್ ನೂತನ ಬಸ್‌ನಿಲ್ದಾಣದ ಸದ್ಯದ ಸ್ಥಿತಿ ಕಳೆದ 2012 ಅಕ್ಟೋಬರ್ 17ರಂದು ಅಂದಿನ ಸಾರಿಗೆ ಸಚಿವರಾದ ಆರ್. ಅಶೋಕ ಅವರಿಂದ ಉದ್ಘಾಟನೆಯಾಗಿದ್ದು, ಅವತ್ತೊಂದು ದಿನ ಮಾತ್ರ ಹೊಸ ಬಸ್‌ನಿಲ್ದಾಣಕ್ಕೆ ಕಳೆಬಂದಿತ್ತು.
ನಿರ್ಲಕ್ಷ್ಯವೇ ಕಾರಣ: ತದನಂತರ ದಿನ ಕಳೆದಂತೆ ಇದೊಂದು ಅವ್ಯವಸ್ಥೆಯಾಗುತ್ತಲೇ ನಡೆದಿರುವುದಕ್ಕೆ ಈ.ಕ.ರ. ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಬಸ್‌ನಿಲ್ದಾಣಕ್ಕೆ ಹೊಸಹೊಸ ಯೋಜನೆ ರೂಪಿಸದೇ ನಿಲ್ದಾಣ ಕಳೆಗುಂದಿದಂತಾಗಿದೆ. ಇದ್ದ ಅಂಗಡಿ ಮುಗ್ಗಟ್ಟುಗಳಲ್ಲಿ ಕೆಲವರು ಮಾತ್ರ ತೆರೆದುಕೊಂಡು ಕೂತಿದ್ದು, ಉಳಿದವುಗೆಳಲ್ಲ ಬಾಗಿಲೇ ತೆರೆದಿಲ್ಲ ಉಪಹಾರ ಗೃಹವಂತು ಇಲ್ಲವೇ ಇಲ್ಲ ಇನ್ನು ಸಾಕಷ್ಟು ಕೆಲಸಗಳು ಬಾಕಿ ಉಳಿದಿದ್ದರೂ ಬಸ್ ನಿಲ್ದಾಣದ ಉದ್ಘಾಟನೆ ನಂತರ ಇತ್ತ ಹೊರಳಿ ನೋಡಿಲ್ಲ.
ನಿಲ್ದಾಣ ರಕ್ಷಣೆಗೆ ಮುಂದಾಗಿ: ವಿದ್ಯುತ್ ಸೌಲಭ್ಯ, ಸೆಕ್ಯುರಿಟಿಗಾರ್ಡ್, ಹಾಳಾದಗಾರ್ಡನ್, ಶೌಚಾಲಯ ಇದ್ಯಾವುದಕ್ಕೂ ಗಮನ ನೀಡದೇ ಕಾಟಾಚಾರದ ಕಾರ್ಯ ಇಲ್ಲಿ ನಡೆದಿದೆ. ಕೋಟ್ಯಾನು ಗಟ್ಟಲೇ ಹಣ ಖರ್ಚಮಾಡಿ ನಿಲ್ದಾಣ ನಿರ್ಮಿಸಿದ್ದು ಕಾರ್ಯಕಲ್ಪ ವಿಲ್ಲದೆ ಅರ್ಥಕಳೆದು ಕೊಂಡಿದೆ. ತಕ್ಷಣವೇ ವಿಭಾಗೀಯ ಅಧಿಕಾರಿಗಳು ಸಂಬಂಧಿಸಿದ ಜಿಲ್ಲಾಧಿಕಾರಿ, ಶಹಾಪುರ ಹೊಸ ಬಸ್‌ನಿಲ್ದಾಣದ ಬಗ್ಗೆ ಗಮನಹರಿಸಿ ಉತ್ತಮ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡದಿದ್ದರೆ ಕೆಲವೇ ದಿನಗಳಲ್ಲಿ ನಿಲ್ದಾಣ ಸಂಪೂರ್ಣ ಹಾಳಗಲಿದೆ. ಬಸ್‌ನಿಲ್ದಾಣ ನಿರ್ವಹಣೆ ಮಾಡುವ ಸ್ಥಳೀಯ ನಿರ್ವಹಕರು ತಮಗೆ ಸಂಬಂಧವಿಲ್ಲದಂತೆ ಇರದೇ ಸಮಗ್ರವಾಗಿ ಲೋಪ ದೋಷಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೊಸ ನಿಲ್ದಾಣ ರಕ್ಷಣೆಗೆ ಮುಂದಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement