ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಸ್ಪೀಟ್: ಪಂಚಾಯತ್ ರಾಜ್ ಸಿಬ್ಬಂದಿ ಸೇರಿ ಮೂವರ ಬಂಧನ

Mainashree
Updated On : 13 Aug 2013, 12:12 pm

ಗುಲ್ಬರ್ಗ: ಗುಲ್ಬರ್ಗದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಐದು ದಿನಗೂಲಿ ನೌಕರರು ಕಚೇರಿ ಸಮಯದಲ್ಲಿ ಮದ್ಯಪಾನ ಮಾಡಿ ಕಚೇರಿ ಆವರಣದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಖಚಿತ ದೂರಿನ ಮೇರೆಗೆ ಅಲ್ಲಿಗೆ ಹಠಾತ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಪಾನಮತ್ತರಾಗಿ ಇಸ್ಪೀಟ್ ಆಡುತ್ತಿರುವ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪುಂಡಲೀಕ್ ತಂದೆ ಶಂಕರ್ ಭಾವಿನವರ್, ಶರಣಪ್ಪ ತಂದೆ ಭೀಮಣ್ಣ ಮಡಿವಾಳ ಹಾಗೂ ಶರಣಪ್ಪ ತಂದೆ ಶಂಕ್ರಪ್ಪ ಬೀದರ್ ಬಂಧಿತರು.  ಇನ್ನುಳಿದ ಬಸವರಾಜ ಚಿಂಚೋಳಿ ಹಾಗೂ ಪಂಡಿತ ರಾಜಾಪುರ ತಪ್ಪಿಸಿಕೊಂಡಿದ್ದು ಪೊಲೀಸರಿಗೆ ಮುಂದಿನ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.  ಈ ಐದು ಸಿಬ್ಬಂದಿ ವಿರುದ್ಧ ಕೇಸು ದಾಖಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement