ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಧಾರ ನೋಂದಣಿ ಸ್ಥಗಿತ; ಜನರ ಪರದಾಟ

Lingaraj Badiger
Updated On : 14 Aug 2013, 11:07 am

ಚಿತ್ತಾಪುರ: ಇಲ್ಲಿಯ ಸ್ಟೇಷನ್ ಪ್ರದೇಶದಲ್ಲಿರುವ ಆಧಾರ ಕೇಂದ್ರದಲ್ಲಿ ಜನರೇಟರ್ ಕೆಟ್ಟಿರುವುದರಿಂದ ನೋಂದಣಿ ಕಾರ್ಯ ಮಂಗಳವಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಿದರು.
ಬೆಳಗಿನಿಂದ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದ ಆಧಾರ ನೋಂದಣಿಗಾಗಿ ಆಗಮಿಸಿದ್ದರು. ಜನರೇಟರ್ ಕೆಟ್ಟುಹೋಗಿತ್ತು. ದುರಸ್ತಿ ಕಾರ್ಯ ಮಂದಗತಿಯಲ್ಲಿ ನಡೆದಿರುವುದರಿಂದ ನೋಂದಣಿ ಕಾರ್ಯಕ್ಕೆ ಅಡ್ಡಿಯಾಗಿತ್ತು. ಆದರೆ ಇಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಪ್ರತಿದಿನ ಜನರೇಟರ್ ಮೂಲಕ ನೋಂದಣಿ ಕಾರ್ಯ ನಡೆಯುತ್ತಿತ್ತು. ಜನರೇಟರ್ ದುರಸ್ತಿ ಕಾರ್ಯ ಆಗದೇಯಿರುವುದರಿಂದ ಸಾರ್ವಜನಿಕರು ನೋಂದಣಿಗಾಗಿ ಪರದಾಡಿದರು.
ಬೆಳಿಗ್ಗೆಯಿಂದಲೇ ನೋಂದಣಿ ಮಾಡಿಸಲು ಜನರು ಆಗಮಿಸಿದ್ದರು. ಈಗ, ಆಗ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಕಾದು ಕುಳಿತ್ತಿದ್ದರು. ತಡವಾಗಿ ಬಂದ ನೋಂದಣಿ ಆಧಿಕಾರಿಗಳು ಕೇಂದ್ರ ತೆರೆದಾಗ ಜನರೇಟರ್ ಕೈಕೊಟ್ಟಿತ್ತು. ಕೆಲವರು ವಾಪಸ್ಸು ಹೋದರೆ ಮತ್ತೆ ಎಲ್ಲಿ ಬಂದು ಸಾಲಾಗಿ ನಿಲ್ಲಬೇಕು ಎಂಬುವವರು ಕೇಂದ್ರದ ಮುಂದೆ ಜಮಾಯಿಸಿ ಸಾಲಲ್ಲಿ ನಿಂತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement