ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉಚಿತ ಬಿದಿರು ಒದಗಿಸಲು ಮೇದಾ ಜನಾಂಗ ಒತ್ತಾಯ

Lingaraj Badiger
Updated On : 14 Aug 2013, 11:11 am

ಯಾದಗಿರಿ: ಮೇದಾ ಜನಾಂಗದ ಮೂಲ ಕಸುಬಿಗೆ ಬಿದರು ಪ್ರಮುಖವಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆಯಿಂದ ಉಚಿತವಾಗಿ ಬಿದಿರು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಜಿಲ್ಲಾ ಘಟಕ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. 19ನೇ ವಿಶ್ವ ಆದಿವಾಸಿ ದಿನಾಚರಣೆಯ ನಿಮಿತ್ತ ರಾಜ್ಯಾದ್ಯಂತ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ರಾಜ್ಯ ಪರಿಷತ್ತಿನ ಸೂಚನೆಯ ಮೇರೆಗೆ ನಗರದಲ್ಲಿ ಜಿಲ್ಲಾ ಆದಿವಾಸಿ ಪರಿಷತ್ತಿನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಆದಿವಾಸಿ ಜನಾಂಗಕ್ಕೆ ಅಂತ್ಯೋದಯ ಪಡಿತರ ಚೀಟಿ ಒದಗಿಸಬೇಕು. ಅಲ್ಲದೆ ಈ ಜನಾಂಗಕ್ಕೆ ಜಾಬ್ ಕಾರ್ಡ್ ನೀಡಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಕಾರಣ ಸೂಕ್ತವಾದಂತ ಮತ್ತು ನಿರ್ದಿಷ್ಟವಾದ ಸರ್ಕಾರದ ಯೋಜನೆಯಲ್ಲಿ ಸಾಲ ಸೌಲಭ್ಯ ಮತ್ತು ಇತರ ಸವಲತ್ತುಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಅಗ್ರಹಿಸಿದರು.  ಪಾಂಡುರಂಗ ಬಂದಳ್ಳಿ, ನರಸಿಂಗ್ ಲಿಂಗೇರಿ, ಸಾಹೇಬರೆಡ್ಡಿ ಮುಂಡರಗಿ, ಹನಮಂತ ಚಿಂತನಹಳ್ಳಿ, ಬಸಲಿಂಗಪ್ಪ ಡಿ. ಯಂಪಾಡ್, ಹಣಮಂತ ಜಗಳೆ ಯಂಪಾಡ, ಹಣಮಂತ ಬಾಚವಾರ, ಮರೆಪ್ಪ ಕಳ್ಳಮನಿ ಇತರರು ಇದ್ದರು.
ಮೂಲ ಸೌಕರ್ಯ ವಂಚಿತ ದುದ್ದಣಗಿ
ಅಫಜಲ್ಪುರ: ತಾಲೂಕಿನ ದುದ್ದಣಗಿ ಗ್ರಾಮಕ್ಕೆ ಹಲವಾರು ವರ್ಷಗಳಿಂದ ಸರ್ವಋತು ರಸ್ತೆ ಇಲ್ಲದ್ದರಿಂದ ಗ್ರಾಮಸ್ಥರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹಾಳಾಗಿದ್ದು, ಕಾಲ್ನಡಿಗೆಯ ಮೂಲಕ ಗ್ರಾಮಕ್ಕೆ ಸಂಚರಿಸಲು ಸಾಧ್ಯವಾಗದಂತದ ಪರಿಸ್ಥಿತಿ ನಿರ್ಮಾಣವಾಗಿದೆ. ದುದ್ದಣಗಿ ಗ್ರಾಮ ಕರಜಗಿ ಹೋಬಳಿ ವ್ಯಾಪ್ತಿಯಲ್ಲಿದೆ. ಅಳ್ಳಗಿ (ಬಿ) ಗ್ರಾಮ ಪಂಚಾಯ್ತಿಗೆ ಸೇರಿರುವ ಈ ಗ್ರಾಮ ಭೋಸಗಾ ಕ್ರಾಸ್‌ನಿಂದ 10 ಕಿ.ಮೀ. ಒಳಗಡೆ ಬರುತ್ತದೆ. ಈ ಗ್ರಾಮಕ್ಕೆ ಸರ್ವಋತು ರಸ್ತೆಯಿಲ್ಲದ ಕಾರಣ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನ ಸೌಕರ್ಯ (ವ್ಯವಸ್ಥೆ) ಮಾಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಇಲ್ಲಿನ ಜನರು ಸುಮಾರು ವರ್ಷಗಳಿಂದ ಸೌಲಭ್ಯವಿಲ್ಲದೆ ನರಳುತ್ತಿದ್ದಾರೆ. ಗ್ರಾಮದಲ್ಲಿ ಒಂದು ಖಾಸಗಿ ವಾಹನವಿದೆ. ಅದರಿಂದಲೇ ಗ್ರಾಮಸ್ಥರು ದಿನಾಲು ಸಂಚರಿಸಬೇಕಾದ ಪರಿಸ್ಥಿತಿಯಿದೆ. ಮಳೆಗಾಲದಲ್ಲಿ ರಸ್ತೆ ಹಾಳಾಗಿ ವಾಹನ ಒಡಾಡುವುದಿಲ್ಲ. ಹೀಗಾಗಿ ಗ್ರಾಮಸ್ಥರು ಭೋಸಗಾ ಕ್ರಾಸ್‌ವರೆಗೆ 10 ಕಿಮೀ ನಡೆದುಕೊಂಡು ಬಂದು ವಾಹನ ಹತ್ತಿ ಬೇರೆ ಗ್ರಾಮಗಳಿಗೆ ಹೋಗುವಂತಹ ಸ್ಥಿತಿ. ಈ ಗ್ರಾಮದ ಜನರಿಗೆ ತಾಲೂಕು ಕೇಂದ್ರ 40 ಕಿಮೀ ಅಂತರದಲ್ಲಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮಹಿಳಾ ಶೌಚಾಲಯವಿಲ್ಲ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಸಂಜೆಯಾದರೆ ಸಾಕು ಗ್ರಾಮದಲ್ಲಿ ಕತ್ತಲು ಆವರಿಸಿ ಕತ್ತಲಲ್ಲಿಯೇ ಕಾಲ ಕಳೆಯಬೇಕಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಅಳಲು “OÚ«Ú­sÚ®Úúڒ ಎದುರು ತೋಡಿಕೊಂಡರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement