ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಲುವೆ ನೀರು ಪಡೆದು ಆಕ್ರಮ ಕೆರೆ ನಿರ್ಮಾಣ; ಆರೋಪ

Lingaraj Badiger
Updated On : 14 Aug 2013, 11:10 am

ಶಹಾಪುರ: ತಾಲೂಕಿನ ಹತ್ತಿಗೂಡೂರು ಗ್ರಾಮದ ಸಮೀಪ ಹಾಯ್ದು ಹೋಗುವ ವಿತರಣಾ ಕಾಲುವೆ 9ರಲ್ಲಿ ಕಾಲುವೆಯಿಂದ ನೀರು ಹರಿಸಿ ಕೆರೆ ನಿರ್ಮಾಣ ಮಾಡಲಾಗಿದೆ. ಇದನ್ನು ಕಂಡೂ ಕಾಣದಂತೆ ಕೆಬಿಜೆಎನ್ನೆಲ್  ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಈ ಕುರಿತು ಸಮಗ್ರವಾಗಿ ಪರಿಶೀಲಿಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಶರಣರಡ್ಡಿ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆಂಧ್ರ ಮೂಲದವರು ಕಾಲುವೆಯನ್ನು ಒಡೆದು ಕಾಲುವೆ ಕೊನೆಭಾಗದ ರೈತರಿಗೆ ನೀರು ಬಾರದಂತೆ ಮಾಡಿ ತಾವು ಕೆರೆ ನಿರ್ಮಿಸಿಕೊಂಡು ಅದಕ್ಕೆ ಅಕ್ರಮವಾಗಿ ಕಾಲುವೆಯಿಂದ ನೀರು ತುಂಬಿಸಿದ್ದಾರೆ. ಸರ್ಕಾರದ ನಿಮಯಮದನ್ವಯ ಲಘು ನೀರಾವರಿ ಬೆಳೆ ಬೆಳೆಯದೆ ಸರ್ಕಾರದ ಮಟ್ಟದಲ್ಲಿ ನಿಷೇಧಿತ ಬೆಳೆಯಾಗಿರುವ ಬತ್ತವನ್ನೆ ಬೆಳೆಯುತ್ತಿರುವುದು ನಿಗಮದ ಅಧಿಕಾರಿಗಳ ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ಒಂದಡೆ ಕೆಲ ರೈತರಿಗೆ ಕಾಲುವೆ ನೀರೆಂಬುದು ಗಗನ ಕುಸುಮವಾಗಿದ್ದು, ಇನ್ನೊಂದೆಡೆ ಕಾಲುವೆಯಿಂದ ಆಕ್ರಮವಾಗಿ ನೀರು ಪಡೆಯುವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕಾಲುವೆಗಳು ಶಿಥಿಲಗೊಂಡಿವೆ. ಇನ್ನು ವಿತರಣಾ ಕಾಲುವೆಗೆ ಸಂಬಂಧಿಸಿದಂತೆ ಹತ್ತಿಗುಡೂರದಲ್ಲಿ ಜಲ ನಿಗಮದ ಕಚೇರಿಯಿದ್ದರೂ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ನೀರು ನಿರ್ವಹಣೆಯ ಬಗ್ಗೆ ಪರಿಶೀಲನೆ ಮಾಡುವುದು ಅಪರೂಪವಾಗಿದೆ. ಕಾಲುವೆ ರಸ್ತೆಗಳು ಜಾಲಿಕಂಟಿಯಿಂದ ಮುಚ್ಚಿ ಹೋಗಿವೆ. ಕಾಲುವೆ ಗೇಟುಗಳು ಮುರಿದು ತುಕ್ಕು ಹಿಡಿದಿವೆ. ಕೇವಲ ಕಾಗದದಲ್ಲಿಯೆ ಪರಿಶೀಲನೆ ಮುಗಿಸುತ್ತಿದ್ದು, ನೀರು ವ್ಯರ್ಥ ಪೋಲಾಗುವುದಕ್ಕೆ ಹಲವು ಅಧಿಕಾರಿಗಳು ಹೊಣೆಯಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.
ಇನ್ನಾದರು ವ್ಯರ್ಥವಾಗಿ ನೀರು ಪೋಲಾಗುವುದನ್ನು ತಪ್ಪಿಸಿ ಆಕ್ರಮವಾಗಿ ನೀರು ಪಡೆಯುವರ ವಿರುದ್ಧ ಕ್ರಮ ಜರುಗಿಸಬೇಕೆಂದು ಶರಣುರಡ್ಡಿ ಮತ್ತು ಭೀಮರಾಯ ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ನೀರು ಪೋಲುಮಾಡುವ ಆಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ಸರ್ಕಾರ ಇಂಥ ಅವ್ಯವಸ್ಥೆ ತಪ್ಪಿಸಿ ಸಮಸ್ತ ರೈತರ ಜಮೀನುಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement