ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಿ.ಕಿಷ್ಟಪ್ಪ ಜಿಲ್ಲಾ ನೂತನ ಅಧ್ಯಕ್ಷ

Lingaraj Badiger
Updated On : 14 Aug 2013, 11:04 am

ಯಾದಗಿರಿ: ತೀವ್ರ ಸ್ಪರ್ಧೆ ಏರ್ಪಟ್ಟಿದ್ದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಿ. ಕಿಷ್ಟಪ್ಪ ಅವರಿಗೆ ಅದೃಷ್ಟದ ಮೂಲಕ ವಿಜಯದ ಮಾಲೆ ಒಲಿದಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಪಿ. ಕಿಷ್ಟಪ್ಪ ಹಾಗೂ ವೆಂಕಟೇಶ ಸ್ಪರ್ಧಿಸಿದ್ದರು. ಮತದಾನದಲ್ಲಿ ಇಬ್ಬರಿಗೂ ತಲಾ 26 ಮತಗಳು ಬಿದ್ದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.
  ಆದರೆ ಕಿಷ್ಟಪ್ಪ ಅವರಿಗೆ ಚೀಟಿಯಲ್ಲಿ ಅದೃಷ್ಟ ಲಕ್ಷ್ಮಿ ಒಲಿಯುವ ಮೂಲಕ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು.ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 53 ಸದಸ್ಯರ ಪೈಕಿ 52 ಸದಸ್ಯರು ಮತ ಚಲಾಯಿಸಿದರು. ಕೊನೆಗೆ ಚುನಾವಣೆ ಅಧಿಕಾರಿ ಬಸೀರ್ ಅಹ್ಮದ್ ಉಭಯರೊಂದಿಗೆ ಮಾತುಕತೆ ನಡೆಸುವ ಮೂಲಕ ಒಪ್ಪಿಸಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಆಗ ಚೀಟಿ ಎತ್ತಿದಾಗ ಕಿಷ್ಟಪ್ಪ ಹೆಸರು ಹೊರಬೀಳುತ್ತಿದ್ದಂತೆ ಅದೃಷ್ಟದ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಆದ್ಯಪ್ಪ ಬಾಗ್ಲಿಗೆ 25 ಹಾಗೂ ಪ್ರತಿಸ್ಪರ್ಧಿ ಮಹಿಪಾಲರೆಡ್ಡಿಗೆ 27 ಮತಗಳು ಬೀಳುವ ಮೂಲಕ ಮಹಿಪಾಲರೆಡ್ಡಿ ಗೆಲವು ಸಾಧಿಸಿದರು. ಖಜಾಂಚಿ ಸ್ಥಾನದ ಅಭ್ಯರ್ಥಿ ರಾವುತಪ್ಪಗೆ 25 ಮತಗಳು ಲಭಿಸಿದರೆ ಪ್ರತಿಸ್ಪರ್ಧಿ ಯಮರೆಡ್ಡಿ 27 ಮತಗಳು ಪಡೆಯುವ ಮೂಲಕ ವಿಜಯ ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಬಷೀರ್ ಅಹ್ಮದ್ ತಿಳಿಸಿದ್ದಾರೆ.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಿಷ್ಟಪ್ಪ ಗೆಲವು ಸಾಧಿಸುತ್ತಿದ್ದಂತೆಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement