ಭಗತ್ಸಿಂಗ್ ಸ್ಮರಣೆ
ಶಹಾಪುರ: ದೇಶದ ಸ್ವಾತಂತ್ರ್ಯ ಚಳವಳಿಗಾಗಿ ಗಲ್ಲುಗಂಭಕ್ಕೆ ತಲೆಕೊಟ್ಟ ಕ್ರಾಂತಿಕಾರಕ ಹೋರಾಟಗಾರ ಭಗತ್ಸಿಂಗ್ ಎಂದು ಸಾಹಿತಿ ಅಶೋಕ ಚೌದರಿ ನುಡಿದರು.
ಶಹಾಪುರದ ಯಶಸ್ವಿನಿ ಪದವಿ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೋತ್ಸವ ಸರಣಿ ಕಾರ್ಯಕ್ರಮದ ಸಮಾರೋಪ ಹಾಗೂ ಭಗತ್ಸಿಂಗ್ರ ಕುರಿತು ಆಯೋಜಿಸಲಾದ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡಿದ್ದರು.
ಅರವಿಂದ ಉಪ್ಪಿನ್, ಭೀಮಾಶಂಕರ ಬೆನಕನಳ್ಳಿ ಇದ್ದರು. ಕಾಲೇಜಿನ ಪ್ರಾಚಾರ್ಯ ರವಿಕುಮಾರ ದೋರನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಯ್ಯ ಸ್ವಾಮಿ ಇಟಗಿ ಪ್ರಾಸ್ತಾವಿಕ ಮಾತನಾಡಿದರು.