ರಸ್ತೆ ಕಾಮಗಾರಿಗೆ ಮಾಲಕರೆಡ್ಡಿ ಚಾಲನೆ
ಯಾದಗಿರಿ: ನಗರದ ಬಾಲಾಜಿ ದೇವಸ್ಥಾನದ ಎದುರುಗಡೆ ಇರುವ ರಸ್ತೆ ಕಾಮಗಾರಿಗೆ ಶಾಸಕ ಮಾಲಕರಡ್ಡಿ ಭೂಮಿ ಪೂಜೆ ನೆರವೆರಿಸಿ ಚಾಲನೆ ನೀಡಿದರು. ನಗರೋತ್ಥಾನ ಯೋಜನೆಯ 3.9 ಕೋಟಿ ಅನುದಾನದಲ್ಲಿ ಚಿತ್ತಾಪುರ ರಸ್ತೆಗೆ ಜೋಡಿಸುವ ಬಾಲಾಜಿ ದೇವಸ್ಥಾನ ಮಾರ್ಗದ ಮುಖ್ಯ ರಸ್ತೆ ನಿರ್ಮಿಸಲಾಗುತ್ತಿದ್ದು, 7 ಮೀಟರ್ ಅಗಲದ ಈ ರಸ್ತೆಯ ಡಾಂಬರೀಕರಣ ಮಾಡಲಾಗುವುದು. 1.2 ಕಿಮೀ ಉದ್ದದ ಈ ರಸ್ತೆ ನಿರ್ಮಾಣದಿಂದ ಸ್ಟೇಷನ್ ಏರಿಯಾದ ಬಸ್‌ನಿಲ್ದಾಣ ಮಾರ್ಗವಾಗಿ ನಗರದ ಗಾಂಧಿ ವೃತ್ತಕ್ಕೆ ತೆರಳಲು ಅನುಕೂಲವಾಗಲಿದೆ. ಇದು ನಗರದ ಪ್ರಮುಖ ಕೂಡು ರಸ್ತೆಯಾಗಿದ್ದು, ಈ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಕೈಗೆತ್ತಿಕೊಳ್ಳಲಾದ ಈ ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಶಾಸಕರು ಗುತ್ತೇದಾರರಿಗೆ ಸೂಚಿಸಿದರು. ಮುಖಂಡರಾದ ಶ್ರೀನಿವಾಸರೆಡ್ಡಿ ಕಂದಕೂರು, ರವಿಮಾಲಿಪಾಟೀಲ್, ಶರಣಗೌಡ ಅರಿಕೇರಿ, ಬಸರೆಡ್ಡಿ, ಎಂ.ಎಸ್. ಪಾಟೀಲ್, ಶಶಿಧರ ಅರಿಕೇರಿ, ವೆಂಕಟರೆಡ್ಡಿ ಗುರುಸುಣಗಿ, ರಾಹುಲ ಅರಿಕೇರಿ, ಸುರೇಶ ಜೈನ್, ಶರಣಗೌಡ ಬೆಟಗೇರಿ ಇದ್ದರು.