ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

101 ಕೆಜಿ ಸಜ್ಜೆ ಚೀಲ ಹೊತ್ತು 6 ಕಿಮೀ ನಡೆದ ರಾಹುತಪ್ಪ!

Mainashree
Updated On : 14 Aug 2013, 11:01 am

ಕೆಂಭಾವಿ: ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಯುವಕರು ವಿವಿಧ ಕಸರತ್ತುಗಳ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ಇದಕ್ಕೆ ನಾನೇನು ಕಮ್ಮಿ ಎಂಬಂತೆ ಸ್ಥಳೀಯ ಯುವಕನೊಬ್ಬ 101 ಕೆಜಿ ತೂಕದ ಸಜ್ಜೆ ಚೀಲವನ್ನು ಇಲ್ಲಿಯ ಹನುಮಂತ ದೇವರ ದೇವಸ್ಥಾನದಿಂದ ಸುಮಾರು 6 ಕಿಮೀ ದೂರದ ಪರಸನಹಳ್ಳಿ ಹನುಮಂತ ದೇವರ ದೇವಸ್ಥಾನದವರೆಗೆ ಬರಿಗಾಗಲಲ್ಲಿ ಹೊತ್ತು ಸಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾನೆ.
ಸವಾಲಿಗೆ ಪ್ರತಿ ಸವಾಲು: ಮೂರು ದಿನಗಳ ಹಿಂದೆ ಪರಸನಹಳ್ಳಿಯ ಯುವಕನೊಬ್ಬ ಅದೇ ಸಜ್ಜೆ ಚೀಲವನ್ನು ತನ್ನ ಗ್ರಾಮದಿಂದ ಕೆಂಭಾವಿಗೆ ತಂದು 'ಕೆಂಭಾವಿಯಲ್ಲಿ ಯಾರಾದರೂ ಶಕ್ತಿವಂತರಿದ್ದರೆ ಮರಳಿ ಚೀಲವನ್ನು ಪರಸನಹಳ್ಳಿಗೆ ತನ್ನಿರಿ' ಎಂದು ಸವಾಲು ಹಾಕಿ ಹೋಗಿದ್ದ. ಆದರೆ ಒಂದಿಬ್ಬರು ಯುವಕರು ಅರ್ಧ ಹಾದಿಗೆ ತೆಗೆದುಕೊಂಡು ಹೋಗಿ ಮರಳಿ ಬಂದಿದ್ದರು. ಆದರೆ ಬುಧವಾರ ರಾಹುತಪ್ಪ ಶರಣಪ್ಪ ಯರಗಲ್ ಎಂಬ ಯುವಕ ಸೆಜ್ಜೆ ಚೀಲವನ್ನು ಹೊತ್ತುಕೊಂಡು ಪರಸನಹಳ್ಳಿಗೆ ತೆಗೆದುಕೊಂಡು ಹೋಗಿ ಸಾಹಸ ಮೆರೆದಿದ್ದಾನೆ. ಈತನ ಸಾಹಸವನ್ನು ನೋಡಲು ನೂರಾರು ಜನ ಈತನ ಜತೆ ಬೆನ್ನು ಹತ್ತಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ಈತನ ಸಾಹಸವನ್ನು ಮೆಚ್ಚಿ ಪ್ರೋತ್ಸಾಹಿಸಿದರು. ನಂದಪ್ಪ ಕವಾಲ್ದಾರ, ಕೆಂಚಪ್ಪ ಹಿರೇಕುರಬರ, ದೇವು ಯಾಳಗಿ, ವಿನೋದಗೌಡ ಪಾಟೀಲ, ವಿಶ್ವನಾಥಗೌಡ ಲೋಣಿ, ಶಿವಶರಣ ಅಸ್ಕಿ, ನಿಂಗಣ್ಣ ಯರಗಲ್, ಶಿವಶರಣ ಪೂಜಾರಿ, ಆನಂದ ಆಶಿಂಗಾಳ ಸೇರಿದಂತೆ ನೂರಾರು ಜನ ಯುವಕರು ಈತನ ಜತೆಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement