ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಸತಿ ನಿಲಯಕ್ಕೆ ಸಿಇಒ ಪಲ್ಲವಿ ಭೇಟಿ, ಪರಿಶೀಲನೆ

Vishwanath S
Updated On : 15 Aug 2013, 11:43 am

ಕನ್ನಡಪ್ರಭ ವಾರ್ತೆ ,  ಜೇವರ್ಗಿ ,  ಆ.14
ಪಟ್ಟಣದ ಹೊರವಲಯದಲ್ಲಿರುವ ಎಸ್‌ಸಿ, ಎಸ್‌ಟಿ ವಸತಿ ನಿಲಯಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ರಾತ್ರಿ ವಸತಿ ನಿಲಯದಲ್ಲಿ ಮಕ್ಕಳು ಊಟ ಮಾಡಿದ ನಂತರ ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರು. ಘಟನೆಯ ನಂತರ ಸಿಇಒ ಬುಧವಾರ ವಸತಿ ನಿಲಯವನ್ನು ಸಂಪೂರ್ಣ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಭೇಟಿ ನೀಡಿದ ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅಕ್ಕಮಹಾದೇವಿ ಬಿರಾದಾರ ಅವರು ಸಿಇಒ ಅವರೊಂದಿಗೆ ಮಾತನಾಡಿ, ಇಲ್ಲಿಯ ಅವ್ಯವಸ್ಥೆ ಹಾಗೂ ಕಳಪೆ ಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಿದ್ದರಿಂದಲೇ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಲು ಕಾರಣವಾಗಿದ್ದು, ಈ ಇಲಾಖೆಯಡಿ ಬರುವ ತಾಲೂಕಿನ ಎಲ್ಲ ವಸತಿ ನಿಲಯಗಳ ಸ್ಥಿತಿ ಅಧೋಗತಿಗೆ ತಲುಪಿದ್ದು, ಇಲಾಖೆಯ ಅಧಿಕಾರಿ ಹಾಗೂ ನೌಕರರ ಬೇಜವಾಬ್ದಾರಿಯಿಂದ ಮಕ್ಕಳು ಆಪತ್ತಿಗೆ ಸಿಲುಕಲು ಕಾರಣವಾಗಿದ್ದಾರೆಂದು ಆರೋಪಿಸಿದರು.
ಬಡ ಮಕ್ಕಳೊಂದಿಗೆ ಚೆಲ್ಲಾಟ ವಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜಿಪಂ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ, ಸದಸ್ಯರಾದ ಗುರುಲಿಂಗಪ್ಪಗೌಡ ಆಂದೋಲಾ, ಕಸ್ತೂರಿಬಾಯಿ ಸಿದ್ರಾಮಪ್ಪಗೌಡ ಹರನೂರ, ಅನೀತಾ ಪವನಕುಮಾರ್ ವಳಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement