ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Lingaraj Badiger
Updated On : 16 Aug 2013, 11:13 am

ಯಾದಗಿರಿ: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಧ್ವಜಾರೋಹಣ ನೇರವೆರಿಸಿದರು. ಈ ಸಂದರ್ಭದಲ್ಲಿ ಚನ್ನಪ್ಪಗೌಡ, ವಿಶ್ವನಾಥ ಶಿರವಾರ್, ಬಸವರಾಜ ಚಂಡ್ರಿಕಿ, ಬಾಬಾ ಖಾಜಿ, ಸಲಿಂ ಗೋಗಿ, ನಾಗರತ್ನ ಅನಪುರ, ಚಾಂದಪಾಶಾ, ಸಲಿಂ ಪಟೇಲ್, ರಾಧಾಕಿಶನ್, ಶರಣಗೌಡ, ಸೋಮನಾಥ, ರುಕ್ಮಣಿ, ಸನಮ್ಮ, ಬೋಜಣ್ಣಗೌಡ, ಮರೆಪ್ಪ ಚಟ್ಟರಕರ್, ಶರಣಪ್ಪ ಗುಳಗಿ, ಬಿ.ರಾಜು, ರಾಜು ಗೋವಾ ಇತರರು ಇದ್ದರು.
ಬಿಜೆಪಿ ಕಚೇರಿಯಲ್ಲಿ ..
ಯಾದಗಿರಿ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೀರಣ್ಣ ಮಲ್ಲಾಬಾದಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರಳು ದುಡಿದು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ. ದೇಶದ ಸಂಸ್ಕೃತಿಯನ್ನು ಇಂದಿನ ಯುವಕರು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದರು. ನೀಲಕಂಠ ಯಲ್ಹೇರಿ, ಮಲ್ಲಿಕಾರ್ಜುನ ಗುಳೇದ್, ದೇಂವಿದ್ರನಾಥ ನಾದ್, ದೇವರಾಜ ನಾಯಕ್, ಗೋಪಾಲ ದಾಸನಕೇರಾ, ವೆಂಕಟರಡ್ಡಿ ಅಬ್ಬೆತುಮಕೂರ, ಲಿಂಗಪ್ಪ ಹತ್ತಿಮಿನಿ, ಬೋಜಪ್ಪ ಮಗ್ಗಾ, ಪಕೀರಪ್ಪ, ಮಹಾದೇವಪ್ಪ ಗಣಪೂರ, ಸಂಗಣ್ಣಾ ತಡಿಬಿಡಿ, ಹಣಮಂತ ಇಟಿಗಿ, ದೇವಿಂದ್ರ ಯರಗೋಳ, ರಾಜೇಶ ಜೈನ್, ಶ್ರೀದೇವಿ, ಶಕುಂತಲಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement