ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧ ಸಾಧಕ ಮಹನೀಯರಿಗೆ ಸತ್ಕಾರ

Lingaraj Badiger
Updated On : 16 Aug 2013, 11:13 am

ಕ.ಪ್ರ.ವಾರ್ತೆ, ಯಾದಗಿರಿ, ಆ. 15
ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 67ನೇ ಸ್ವಾತಂತ್ರ್ಯೋತವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.
ಸಾಹಿತ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಯ್ಯಣ್ಣ ಹುಂಡೇಕಾರ್, ಸಾಮಾಜಿಕ ಕ್ಷೇತ್ರದಿಂದ ಬಾಬು ಧೋಖಾ, ಸಂಗೀತ ಕ್ಷೇತ್ರದಿಂದ ಬಸವರಾಜ ಬಂಟನೂರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರ ಕುಟುಂಬದರನ್ನೂ ಸನ್ಮಾನಿಸಲಾಯಿತು. ಸಗರ ಗ್ರಾಮದ ಹುತಾತ್ಮ ಯೋಧ ಮಲ್ಲಪ್ಪ ಅಂದೆಳ್ಳಿ ಅವರ ಪತ್ನಿ ಶ್ರೀದೇವಿ, ಸಗರದ ಸುಭಾಷ ಮಡಿವಾಳ ಅವರ ಪತ್ನಿ ಗಂಗಮ್ಮ ಹಾಗೂ ಕವಡಿಮಟ್ಟಿಯ ಯೋಧ ಶರಣಬಸವ ಕೆಂಗುರಿ ಅವರ ತಾಯಿ ಮಲ್ಲಮ್ಮ ಅನರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಎಸ್ಪಿ ವಂಶಿಕೃಷ್ಣ, ಜಿಪಂ ಅಧ್ಯಕ್ಷ ಶರಣಿಕಕುಮಾರ ಧೋಖಾ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮೀ ಚಂಡ್ರಕಿ, ಅಮರೇಶ್ವರಿ ಚಿಂಚನಸೂರ ಇದ್ದರು.
ಪಿಎಲ್‌ಡಿ ಬ್ಯಾಂಕ್‌ನಲ್ಲಿ: ನಗರದಲ್ಲಿರುವ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಆವರಣದಲ್ಲಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಶಂಕರರಡ್ಡಿ ಪಾಟೀಲ್ ಯಲಸತ್ತಿ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕ್ ಉಪಾಧ್ಯಕ್ಷ ವಿಶ್ವನಾಥರಡ್ಡಿ ಚಿಂತಗುಂಟಾ, ನಿರ್ದೇಶಕ ಜಗನಾಥರಡ್ಡಿ ಸಂಬರ್, ಸುರೇಶ ಆಕಳ, ಪ್ರಕಾಶರಡ್ಡಿ ಸೈದಾಪುರ, ಚಂದ್ರಾಮಪ್ಪ ವಡ್ನಳ್ಳಿ ಇದ್ದರು.
ಹತ್ತಿಕುಣಿಯಲ್ಲಿ: ತಾಲೂಕಿನ ಹತ್ತಿಕುಣಿ ಗ್ರಾಪಂ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಲಕ್ಷ್ಮಿಕಾಂತ ತಮ್ಮಣೋರ್ ಧ್ವಜಾರೋಹಣ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement