ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧೆಡೆ ಸ್ವಾತಂತ್ರ್ಯ ಸಂಭ್ರಮ

Lingaraj Badiger
Updated On : 16 Aug 2013, 11:14 am

ಹುಣಸಗಿ: ಹುಣಸಗಿ ಪಟ್ಟಣ ಸೇರಿದಂತೆ ವಿವಿಧೆಡೆ 67ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.  ವೃತ್ತ ನೀರಿಕ್ಷಕ ಕಚೇರಿಯಲ್ಲಿ ಸಿಪಿಐ ಸತ್ಯನಾರಾಯಣರಾವ್ ಧ್ವಜಾರೋಹಣ ಮಾಡಿದರು. ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವೀರಣ್ಣ ಹಳ್ಳಿ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಕಚೇರಿ ಆವರಣದಲ್ಲಿ ಅಧ್ಯಕ್ಷ ಸುರೇಶ ನೀರಲಗಿ ಧ್ವಜಾರೋಹಣ ನೆರವೇರಿಸಿದರು.
ಹುಣಸಗಿ ಯುಕೆಪಿ ಕ್ಯಾಂಪ್ ಮಾದರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಬಸನಗೌಡ ಚೌದರಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾ ವಿಕಾಸ ಶಾಲೆಯಲ್ಲಿ ಸಂಸ್ಥಾಪಕ ಬಸವರಾಜಸ್ವಾಮಿ ಸ್ಥಾವರಮಠ ಧ್ವಜಾರೋಹಣ ಮಾಡಿದರು. ಅತಿಥಿಗಳಾಗಿ ಗುರಲಿಂಗಯ್ಯ ಸ್ಥಾವರಮಠ, ಬಸವರಾಜ ಬೆಳ್ಳಿ, ಮೇಘಾ ದೇಶಮುಖ, ಶರಣಮ್ಮ ಬಂಡೋಳಿ, ಶಾರದಾ ಸುಣಗಾರ, ಭಾರತಿ ಹಿರೇಮಠ, ವನಜಾಕ್ಷಿ ಬಾಗೋಡಿ, ಜ್ಯೋತಿ ಪತ್ತಾರ ಇತರರು ಇದ್ದರು.
ಪದವಿ ಕಾಲೇಜಲ್ಲಿ..
ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾನಾಗೌಡ ಪಾಟೀಲ್ ಧ್ವಜಾರೋಹಣ ಮಾಡಿದರು. ನಿರ್ದೇಶಕ ಎಸ್.ಎಸ್. ಬಿರಾದಾರ, ಐಟಿಐ ಪ್ರಾಚಾರ್ಯ ಬಿ.ಡಿ ಮರೋಳ, ಕೆ.ಜಿ.ದೇಶಪಾಂಡೆ ಕಾಲೇಜಿನ ಸಿಬ್ಬಂದಿ ಇದ್ದರು. ಎಸ್.ಕೆ. ಶಾಲೆ ಕಲ್ಲದೇವನಹಳ್ಳಿಯಲ್ಲಿ ಧ್ವಜಾರೋಹಣವನ್ನು ಸಿಆರ್‌ಣಪಿ ಚನ್ನಯ್ಯಸ್ವಾಮಿ ಹಿರೇಮಠ ಮಾಡಿದರು. ಅತಿಥಿಗಳಾಗಿ ಪತ್ರಕರ್ತ ಮಲ್ಲಾರಾವ ಕುಲಕರ್ಣಿ, ಸುರೇಶ ಎಸ್.ಎಚ್ ಇತರರು ಇದ್ದರು. ಮುಖ್ಯ ಶಿಕ್ಷಕ ಅಮರಯ್ಯಸ್ವಾಮಿ ಜಾಲಿಬೆಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಭೀಮಣ್ಣ ನಾಯ್ಕೋಡಿ ಧ್ವಜಾರೋಹಣ ಮಾಡಿದರು. ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ತಾಪಂ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ದಂಡಿನ್, ಸಿದ್ದು ಮಲಗಲದಿನ್ನಿ, ಬಸವರಾಜ ಮಲಗಲದಿನ್ನಿ ಇತರರು ಇದ್ದರು.
ಅರಕೇರಾದಲ್ಲಿ
ಬಸವೇಶ್ವರ ಶಾಲೆ ಅರಕೇರಾದಲ್ಲಿ ಧ್ವಜಾರೋಹಣವನ್ನು ಗುಂಡಲಗೇರಾ ಗ್ರಾಪಂ ಸದಸ್ಯ ಗೌಡಪ್ಪಗೌಡ ಬಿರಾದಾರ ನೆರವೇರಿಸಿದರು. ಅಧ್ಯಕ್ಷತೆಯನ್ನು ಬಸವರಾಜ ಪಲಗಲದಿನ್ನಿ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಅಯ್ಯಣ್ಣ ಸೂಗೂರು, ಡಾ. ವಡಗೇರಿ, ಶಿವಪುತ್ರ ಹೊಸೂರು ಇದ್ದರು. ಹುಣಸಗಿ ಬಾಲಕಿಯರ ಶಾಲೆಯಲ್ಲಿ ಧ್ವಜಾರೋಹಣವನ್ನು ಮುಖ್ಯ ಶಿಕ್ಷಕಿ ಅಮೃತಬಾಯಿ ಮಾಡಿದರು. ವೀರೇಶ ಚಿಂಚೋಳಿ ಇದ್ದರು.
ದ್ಯಾಮನಹಾಳ ಶಾಲೆಯಲ್ಲಿ
ದ್ಯಾಮನಹಾಳ ಶಾಲೆಯಲ್ಲಿ ಮನೋಹರರಾವ್ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು. ಎಂ.ಎ.ನಧಾಫ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಜಾಕ್ ತಾಳಿಕೊಟಿ, ಶೇಖರಗೌಡ, ಹಣಮಂತಪ್ಪ, ಮಾನಪ್ಪ ಇದ್ದರು.  ಗೆದ್ದಲಮರಿ ಶಾಲೆಯಲ್ಲಿ ಧ್ವಜಾರೋಜಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಸಿದ್ರಾಮರೆಡ್ಡಿಬಾಲರಡ್ಡಿ ಮಾಡಿದರು. ಬಸಯ್ಯ ಮಠ, ಸಂಗಯ್ಯ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement