ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೇ ಮೇರಾ ಭಾರತ್ ಮಹಾನ್...

Lingaraj Badiger
Updated On : 16 Aug 2013, 11:09 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.15
ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ಆಳಂದ, ಅಫಜಲ್ಪುರ, ಚಿಂಚೋಳಿ ಹಾಗೂ ಸೇಡಂ ತಾಲೂಕುಗಳಲ್ಲಿ 57ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಜೇವರ್ಗಿ
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ವೀರ ನಾಯಕರು, ವೀರ ವನಿತೆಯರು ತಮ್ಮ ಜೀವನ ಹಂಗನ್ನೇ ತೊರೆದು ತ್ಯಾಗ ಬಲಿದಾನ ಮಾಡಿದ್ದಾರೆ. ಅಂತಹ ಮಹಾನ್ ನಾಯಕರ ಸ್ಮರಣೆ ಅತ್ಯಗತ್ಯ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 67ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಎನ್. ಗೋಠೆ, ತಾಪಂ ಅಧ್ಯಕ್ಷ ಶರಣಗೌಡ ಹರನೂರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಹರನೂರ ಹಾಗೂ ಸಿದ್ರಾಮಪ್ಪಗೌಡ ಹರನೂರ, ಗಿರೇಪ್ಪಗೌಡ ಪಾಟೀಲ್, ಸಕ್ರೇಪ್ಪಗೌಡ ಹರನೂರ, ಬಸಲಿಂಗಪ್ಪಗೌಡ ಬಿರಾದಾರ, ಭಗವಂತರಾಯ ಪಾಟೀಲ್, ಅಮೀರ್ ಹಂಜಾ, ವಿಜಯಕುಮಾರ್ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ವಿವಿಧ ಶಾಲಾ ಮಕ್ಕಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯಿಂದ ಪಥ ಸಂಚಲನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ತಹಸೀಲ್ ಕಾರ್ಯಾಲಯ: ಪಟ್ಟಣದಲ್ಲಿರುವ ತಹಸೀಲ್ ಕಾರ್ಯಾಲಯದಲ್ಲಿ ತಹಸೀಲ್ದಾರ್ ಎಂ.ಎನ್. ಗೋಠೆ ಧ್ವಜಾರೋಹಣ ನೆರವೇರಿಸಿದರು. ಆನಂದ, ಅರುಣ, ಶಂಕರ, ಪ್ರಕಾಶ ಜ್ಯೋಷಿ ಇದ್ದರು.
ಕಾಂಗ್ರೆಸ್ ಕಚೇರಿ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಡಾ. ಅಜಯಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದರು.
ಮುಖಂಡರಾದ ಬಸವಣೆಪ್ಪ ಗೌನಳ್ಳಿ, ಚಂದ್ರಶೇಖರ ಹರನಾಳ, ರಾಜಶೇಖರ ಸೀರಿ, ಸುಧೀಂದ್ರ ಆಲಬಾಳ, ಸಂಗಣ್ಣಗೌಡ ಗುಳ್ಯಾಳ, ನೀಲಕಂಠ ಕಟ್ಟಿಸಂಗಾವಿ, ತಮ್ಮಣ್ಣ ಬಾಗೇವಾಡಿ, ಮಹಿಬೂಬ್ ಚನ್ನೂರ, ವಸಂತ ನರಿಬೋಳ, ರವಿ ಕೋಳಕೂರ, ಪ್ರಕಾಶ ಪುಲಾರೆ, ಶಶಿಧರ್ ಕಲ್ಯಾಣಿ, ಪ್ರಭು ಮಲ್ಲಾಬಾದ್, ಗುರು ಸುಬೇದಾರ್, ಶ್ರೀಮಂತ ಧನ್ನಕರ್, ಚಾಂದಚೌದ್ರಿ ಕುರಶಿ ಇದ್ದರು.
ಬಿಜೆಪಿ ಕಚೇರಿ: ಪಟ್ಟಣದಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಧ್ವಜಾರೋಹಣ ನೆರವೇರಿಸಿದರು.
ರಮೇಶಬಾಬು ವಕೀಲ, ಷಣ್ಮುಖಪ್ಪ ಸಾಹು ಗೋಗಿ, ಬಸವರಾಜ ಕಂದಗಲ್, ಶಿವಶರಣಪ್ಪ ಸಜ್ಜನಶೆಟ್ಟಿ, ಮರೇಪ್ಪ ಬಡಿಗೇರ, ಕಿಶನರಾವ ಹೇಮನೂರ, ಮಲಶೆಟ್ಟೇಪ್ಪಗೌಡ ಹಿರೇಗೌಡ, ಮಲ್ಲಿಕಾರ್ಜುನ ಅದ್ವಾನಿ, ಭೀಮು ಮಡಿವಾಳಕರ್, ಮಹಿಬೂಬ್ ಇನಾಮದಾರ, ಈರಣ್ಣ ಅವರಾದಿ, ಸಿದ್ದು ಅಂಗಡಿ, ದತ್ತು ಪೂಜಾರಿ, ಅಕ್ಬರ್ ಮುಲ್ಲಾ ಇದ್ದರು.
ಆಳಂದ
ಮುಂಬರುವ ಐದು ವರ್ಷಗಳಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಸ್ಥಳೀಯ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ತಾಲೂಕಾಡಳಿತ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
200 ಕೆರೆ ನಿರ್ಮಾಣಕ್ಕೆ ನಿರ್ಧಾರ: ಗಡಿ ಭಾಗದ ಆಳಂದ ಮತಕ್ಷೇತ್ರದಲ್ಲಿ 200 ಕೆರೆಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 500 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ತಹಸೀಲ್ದಾರ್ ಪರಮೇಶ್ವರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಬಾಯಮ್ಮ ಪಾಟೀಲ್, ಇಒ ಅಬ್ದುಲ್ ಸಲಾಂ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಮುಖ್ಯಾಧಿಕಾರಿ ಖೈಸರ್ ಅಹ್ಮದ್, ಬಿಇಒ ವೆಂಕಯ್ಯ ಇನಾಂದಾರ, ಸಿಡಿಪಿಒ ಅಶೋಕ ರಾಜನ್, ಸಮಾಜ ಕಲ್ಯಾಣಾಧಿಕಾರಿ ಕಮಲಾಬಾಯಿ ತಮ್ಮನ್, ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ, ಗುರುಶರಣ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ನಗರದ ವಿವಿಧ ಶಾಲಾ ಮಕ್ಕಳಿಂದ ನೃತ್ಯ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಚಿತ್ತಾಪುರ
ದೇಶದಲ್ಲಿನ ಪ್ರಜಾಪ್ರಭುತ್ವದ ತತ್ವಗಳು, ಮೌಲ್ಯಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನೆ ತ್ಯಾಗಮಾಡಿದರು. ಅನೇಕರು ಜೈಲುವಾಸ ಅನುಭವಿಸಿದರು ಮತ್ತು ಚಿತ್ರಹಿಂಸೆ ಅನುಭವಿಸಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಮತ್ತು ತೀರ ಹಿಂದುಳಿದ ದೇಶವಾದ ಭಾರತ ಅಣು ಶಕ್ತಿ, ಐಟಿಬಿಟಿಯಲ್ಲಿ ನಂ.1 ಆಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ತಹಸೀಲ್ದಾರ್ ಮಲ್ಲೇಶ ತಂಗಾ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಭಯೋತ್ಪಾದನೆ ಹತ್ತಿಕ್ಕಲು ಯುವಕರಿಗೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮಾಜಿ ಜಿಪಂ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ರಾಜಣ್ಣ ಕರದಾಳ ಮಾತನಾಡಿದರು.
ತಾಪಂ ಅಧ್ಯಕ್ಷ ಶರಣಗೌಡ ಭಾಗೋಡಿ, ಉಪಾಧ್ಯಕ್ಷ ಶಾಂತಾಬಾಯಿ ಹರಿಶ್ಚಂದ್ರ, ಎಪಿಎಂಸಿ ಅದ್ಯಕ್ಷ ಶಿವಯೋಗಿ ಸಾಹು, ಉಪಾಧ್ಯಕ್ಷ ಸಂತೋಷ ಚಾಮನೂರ, ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಿಗೇರಿ, ಮುಕ್ತಾರ್ ಪಟೇಲ್, ಚಂದ್ರಶೇಖರ ಕಾಶಿ, ಡಾ. ಪ್ರಭುರಾಜ ಕಾಂತಾ, ರವೀಂದ್ರ ಸಜ್ಜನಶೆಟ್ಟಿ, ರಾಜಣ್ಣ ಮುಸ್ತೆಜಾರ, ಸಿದ್ದಮ್ಮ ಕಾಶನೂರ, ಸಿಪಿಐ ಚಂದ್ರಕಾಂತ ಪೂಜಾರಿ, ಶ್ರೀಮಂತ ಹೊಸಮನಿ ಉಪಸ್ಥಿತರಿದ್ದರು.
ಪಿಎಸ್‌ಐ ಸಂಜುಕುಮಾರ್ ಹಾಗೂ ಗೃಹ ರಕ್ಷಕ ದಳದ ವತಿಯಿಂದ ಕವಾಯತ ನಡೆಯಿತು. ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು. ಪ್ರತಿಭಾ ಚಿನ್ನಕಟ್ಟಿ ಸ್ವಾಗತ ಗೀತೆ ಹಾಡಿದರು. ಶ್ರೀನಿವಾಸ ಚಾಪಲೆ ಕಾರ್ಯಕ್ರಮ ನಿರೂಪಿಸಿದರು.
ಅಫಜಲ್ಪುರ
ತ್ಯಾಗ ಬಲಿದಾನ ಮಾಡಿದ ಅನೇಕ ಹೋರಾಟಗಾರರ ಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು ಎಂದು ತಾಲೂಕು ದಂಢಾಧಿಕಾರಿ ಶಿವರಂಗಪ್ಪ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶಾಸಕ ಮಾಲೀಕಯ್ಯ ಗುತ್ತೇದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಆ. 15 ರಂದು ಧ್ವಜಾರೋಹಣ ಮಾಡದೇ ಪ್ರತಿದಿನ ಆಚರಣೆ ಮಾಡಬೇಕು. ತಾಲೂಕಿನ 22 ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳನ್ನು ಕರೆದು ಸಭೆ ನಡೆಸಿ ಧ್ವಜಾರೋಹಣ ಮಾಡುವುದರ ಬಗ್ಗೆ ತಿಳಿಹೇಳಬೇಕೆಂದು ತಾಪಂ ಅಧಿಕಾರಿ ಎಸ್.ಪಿ. ನಂದಗಿರಿ ಅವರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ತಾಪಂ ಅದ್ಯಕ್ಷೆ ಶಾರಧಾಬಾಯಿ ಗಂಡೋಳ್ಳಿ, ಉಪಾದ್ಯಕ್ಷೆ ಗಂಗುಬಾಯಿ ಜಮಾದಾರ, ಜಿಪಂ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡದ ಮಾತನಾಡಿದರು. ರಾಜೇಂದ್ರ ಬಸಣ್ಣಪ್ಪ ಪಾಟೀಲ್ ಸೇರಿದಂತೆ ಇತರರು ಇದ್ದರು. ನಂತರ ತಾಲೂಕಿನ ವಿವಿದ ಶಾಲಾ ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮ ಜರುಗಿದವು.
ಚಿಂಚೋಳಿ
ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶಾಸಕ ಡಾ. ಉಮೇಶ ಜಾಧವ ಧ್ವಜಾರೋಹಣ ನೆರವೇರಿಸಿದರು. ತಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೀಲ್, ಮುಖ್ಯಾಧಿಕಾರಿ ಸುರೇಶ ಬಬಲಾದ, ತಹಸೀಲ್ದಾರ್ ಮೋಹನ ಜೋಶಿ, ಅಧಿಕಾರಿ ರೇವಣಸಿದ್ದಪ್ಪ ಹಾಗರಗಿ, ಡಿವೈಎಸ್ಪಿ ಪರಶುರಾಮ ಕೋರವಾರ, ಸಿಪಿಐ ಇಸ್ಮಾಯಿಲ್ ಶರೀಪ್, ಗೋಪಾಲರಾವ ಕಟ್ಟಿಮನಿ, ರಾಜಶೇಖರ, ಜಿಪಂ ಸದಸ್ಯ ಸಂಜೀವನ ಯಾಕಾಪುರ ಇತರ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಾಮರಾವ ಚಿಂಚೋಳಿ, ರಾಮರಾವ ಮತ್ತು ಸಂಜೀವ ಚವ್ಹಾಣ ಅವರಿಗೆ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement