ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತ್ಯಾಗ ಬಲಿದಾನಗಳ ಫಲವೇ ಸ್ವಾತಂತ್ರ್ಯೋತ್ಸವ

Vishwanath S
Updated On : 17 Aug 2013, 11:21 am

ಗುಲ್ಬರ್ಗ: ಭಾರತ ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಕಪಿಮುಷ್ಟಿಯಲ್ಲಿತ್ತು.
ಅನೇಕ ದೇಶ ಪ್ರೇಮಿಗಳು ತಮ್ಮ ಪ್ರಾಣಗಳನ್ನು ಬಲಿಕೊಡುವುರ ಮುಖಾಂತರ ಭಾರತ ಮಾತೆಯನ್ನು ಬ್ರಿಟೀಷ್ ಸಂಕೋಲೆಗಳಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟದ್ದಾರೆ.
ಆದ್ದರಿಂದ ಸ್ವಾತಂತ್ರ್ಯ ದೇಶಪ್ರೇಮಿಗಳ ಬಲಿದಾನದ ಫಲ ಎಂದು ವಿಶ್ವನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಗುಲ್ಬರ್ಗ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ನಡೆಯುತ್ತಿರುವ ಕೌಶಲ್ಯಾಧಾರಿತ ತರಬೇತಿ ಕೇಂದ್ರದಲ್ಲಿ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ತರಬೇತಿ ಕಾರ್ಯಕ್ರಮದ  ಸಂಯೋಜಕರಾದ ಮರೆಪ್ಪ ನಂದಿಹಳ್ಳಿ, ಸಂಪನ್ಮೂಲ ವ್ಯಕ್ತಿಗಳಾದ ಸುರೇಖಾ ಪವಾರ, ಅಂಬರೀಷ ಇಟಗಿಕರ್, ಸಚಿನ್, ರಾಜೇಶ ಗುತ್ತೇದಾರ, ಮಹಾಂತಮ್ಮ, ತರಬೇತಿ ಕೇಂದ್ರದ ವ್ಯವಸ್ಥಾಪಕ ಶ್ಯವರ್ ಬೇಗಂ ಮತ್ತು ಭೂಂಯ್ಯಾರ (ಕೆ) ಗ್ರಾಮದ ಸ್ವ-ಸಹಾಯ ಸಂಘದ ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂದು ಸ್ವಾತಂತ್ರ್ಯೋತ್ಸವ ಕಾವ್ಯ ಕುಸುಮಾಂಜಲಿ
ಶಹಾಬಾದ್:  ಶಹಾಬಾದ್ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನೃಪತುಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶಯದಲ್ಲಿ ಆ. 17ರಂದು ಸಂಜೆ 5 ಗಂಟೆಗೆ ಸ್ವಾತಂತ್ರ್ಯೋತ್ಸವದ ಕಾವ್ಯ ಕುಸುಮಾಂಜಲಿ ಕವಿಗೋಷ್ಠಿ ನಡೆಯಲಿದೆ ಎಂದು ಕಸಾಪ ಕಾರ್ಯದರ್ಶಿ ಸೋಮಶೇಖರ ನಂದಿಧ್ವಜ, ರವಿಕುಮಾರ್ ಅಲ್ಲಶೆಟ್ಟಿ ತಿಳಿಸಿದ್ದಾರೆ.
ಜಗದಂಬಾ ಮಂದಿರದ ವಿಜಯ ಕಂಪ್ಯೂಟರ್ಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಡಾ.ಶಂಕರ ಸೋಮಯಾಜಿ ಉದ್ಘಾಟಿಸಲಿದ್ದು, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಜಿ. ವಣಕ್ಯಾಳ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಸಾಹಿತಿ ಎಂ. ಪ್ರಸನ್ನ ಉಪಸ್ಥಿತರಿರುವರು. ಕಸಾಪ ಅಧ್ಯಕ್ಷ ಸಂತೋಷ ಕುಮಾರ್ ಇಂಗಿನಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿವಿಧ ಯುವ ಕವಿಗಳಿಂದ ಕಾವ್ಯ ವಾಚನ, ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ. ರಮೇಶಭಟ್ಟ ಅವರಿಗೆ ಸನ್ಮಾನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement