ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಹಾಬಾದ್: ವಿವಿಧೆಡೆ ಸ್ವಾತಂತ್ರ್ಯೋತ್ಸವ

Vishwanath S
Updated On : 17 Aug 2013, 11:15 am

ಶಹಾಬಾದ್: ಶಹಾಬಾದ್ ನಗರಸಭೆ ಕಚೇರಿಯಲ್ಲಿ ಎಇಇ ಪುಟ್ಟನಾಯಕ ಧ್ವಜಾರೋಹಣ ನೆರವೇರಿಸಿದರು. ನಗರಸಭೆ ಸದಸ್ಯರು, ನಗರಸಭೆ ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.
ಚವ್ಹಾಣ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸುಭದ್ರಮ್ಮ ಚನ್ನಪ್ಪ ಇಂಗಿನಶೆಟ್ಟಿ ಪ್ರಾಥಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ರಾಠೋಡ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಸಾಪ ಗೌರವ ಕಾರ್ಯದರ್ಶಿ ಸೋಮಶೇಖರ ನಂದಿ ಧ್ವಜ ಪೂಜೆ ನೆರವೇರಿಸಿದರು.
ಅತಿಥಿಗಳಾಗಿ ಸಾಹಿತಿ ಮಂಡಲಗಿರಿ ಪ್ರಸನ್ನ, ಉಷಾರಾವ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಮಮತಾ ವಾಲಿ,  ಶಿಕ್ಷಕ ವೃಂದ, ಪಾಲಕರು ಉಪಸ್ಥಿತರಿದ್ದರು. ಮಕ್ಕಳಿಂದ ಲೇಜಿಂ, ಕವಾಯತು, ನೃತ್ಯ ನಡೆಯಿತು.
ಎಸ್‌ಎಸ್ ಮರಗೋಳ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಅನಿಲಕುಮಾರ್ ಕೊಪ್ಪಳಕರ್ ಧ್ವಜಾರೋಹಣ ನೆರವೇರಿಸಿದರು. ಕೆ. ರಮೇಶ ಭಟ್ಟ ಮಾತನಾಡಿದರು. ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಬಲಭೀಮ ಸಾಂಗ್ಲಿ, ಡಾ.ಶಂಕರ ಸೋಮಯಾಜಿ ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ: ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಶಾಲಾ, ಕಾಲೇಜುಗಳಲ್ಲಿ ಸಂಸ್ಥೆ ಅಧ್ಯಕ್ಷ ಹಣಮಂತರಾವ್ ಇಂಗಿನಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ನಿರಂಜನ ಗೊಳೇದ್, ಸಹ ಕಾರ್ಯದರ್ಶಿ ಅನೀಲ್ ಮರಗೋಳ, ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಇಂಗಿನಶೆಟ್ಟಿ, ಶಾಲಾ, ಕಾಲೇಜು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಮಹಾದೇವಿಯವರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಶಾಲಾ ಕಾಲೇಜುಗಳಲ್ಲಿ ಸಂಸ್ಥೆ ಉಪಾಧ್ಯಕ್ಷ ಅಣೆಪ್ಪ ಇಂಗಿನಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಎನ್.ಸಿ. ವಾರದ, ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ, ಅಪ್ಪಾಸಾಹೇಬ್ ಚೌಧರಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಪಾಲ್ಗೊಂಡರು.
ಮಾರುಕಟ್ಟೆ ಪ್ರದೇಶದ ಟಿಪ್ಪು ಸುಲ್ತಾನ್ ಚೌಕ್‌ನಲ್ಲಿ ಡಿವೈಎಸ್, ಪಿಎಂವಿ ಸೂರ್ಯವಂಶಿ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ಮಹ್ಮದ್ ರಫೀಕ ಭಗವಾನ್, ಕಾರ್ಮಿಕ ಮುಖಂಡ ಮಹ್ಮದ್ ಉಬೇದುಲ್ಲಾ, ಮಹ್ಮದ್ ಫಜಲ್ ಪಟೇಲ್, ಎಂಎಡಿ ರಫೀಕ್, ಮೈತಾದಿ ಭಗವಾನ್, ಇಲಿಯಾಸ್ ಭಾಗವಾನ್, ಎಕ್ಬಾಲ್, ದಾವೂದ್, ಯೂಸುಫ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement