ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಕ್ರಮವಾಗಿ ಕಾಲುವೆ ಒಡೆದು ನೀರು ಪೋಲು

Mainashree
Updated On : 18 Aug 2013, 10:58 am

ಶಹಾಪುರ: ತಾಲೂಕಿನ ಸೈದಾಪುರ ಗ್ರಾಮದ ಹತ್ತಿರ ಲ್ಯಾಟ್ರಲ್ ಸಂಖ್ಯೆ 9ಎ ಉಪಕಾಲುವೆಯನ್ನು ಅಕ್ರಮವಾಗಿ ಆಂಧ್ರ ರೈತರು ಒಡೆದು ನೀರು ಬಳಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಎಸ್‌ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಶರಣುರೆಡ್ಡಿ, ಸಂಗಪ್ಪ ಸೈದಾಪುರ ಆರೋಪಿಸಿದ್ದಾರೆ.
ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್ನೆಲ್ ಅಧೀಕ್ಷಕ ಅಭಿಯಂತರರಿಗೆ ದೂರು ಸಲ್ಲಿಸಿದ್ದಾರೆ.
ಸೈದಾಪುರ ಬಳಿ ಲ್ಯಾಟ್ರಲ್ ಉಪಕಾಲುವೆ ಹತ್ತಿರ ಆಕ್ರಮವಾಗಿ ಆಂಧ್ರದ ರೈತರು ಬತ್ತ ನಾಟಿ ಮಾಡುತ್ತಿದ್ದು ಹೆಚ್ಚಿನ ನೀರು ಬಳಸಿಕೊಳ್ಳಲು ಕಾಲುವೆಗಳನ್ನು ಒಡೆದು ನೀರು ಬಳಸಿಕೊಳ್ಳುತ್ತಿದ್ದಾರೆ.
 ಹೀಗಾಗಿ ಕೆಳ ಭಾಗದ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲ.
 ಕೆಳ ಭಾಗದ ಸಣ್ಣ ಹಾಗೂ ಅತಿಸಣ್ಣ ರೈತರು ಜಮೀನಿನಲ್ಲಿ ಪ್ರಸ್ತುತ ಬೆಳೆಗಳಾದ ಹತ್ತಿ, ತೊಗರಿ, ಸೂರ್ಯಕಾಂತಿ, ಸಜ್ಜೆ, ಮೆಣಸಿನಕಾಯಿ ಬೆಳೆಗಳಿಗೆ ನೀರು ಸಿಗದೆ ರೈತರು ಕಂಗಾಲಾಗಿದ್ದಾರೆ.
ಅದ್ದರಿಂದ ಆಂಧ್ರದ ರೈತರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement